ಕರ್ನಾಟಕ

karnataka

ETV Bharat / state

ಹೆದ್ದಾರಿಯಲ್ಲಿ ವಾಹನ ತಡೆದು ಚಾಲಕನ ಹತ್ಯೆ; ಲಕ್ಷಾಂತರ ಮೌಲ್ಯದ ಸ್ಟೀಲ್‌ನೊಂದಿಗೆ ದುಷ್ಕರ್ಮಿಗಳು ಪರಾರಿ

ಹಾವೇರಿಯ ಶಹರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಲಾರಿ ಡ್ರೈವರ್ ಹತ್ಯೆ ಪ್ರಕರಣ ನಡೆದಿದೆ.

ಹಾವೇರಿಯಲ್ಲಿ ಲಾರಿ ಡ್ರೈವರ್ ಹತ್ಯೆ
ಹಾವೇರಿಯಲ್ಲಿ ಲಾರಿ ಡ್ರೈವರ್ ಹತ್ಯೆ

By

Published : Jun 16, 2023, 10:08 PM IST

ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ

ಹಾವೇರಿ:ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಾಗುತ್ತಿದ್ದ ಸ್ಟೀಲ್‌ ತುಂಬಿದ ವಾಹನ ತಡೆದು ಚಾಲಕನನ್ನು ಹತ್ಯೆಗೈದ ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ ಸ್ಟೀಲ್​ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೃತನನ್ನು ಮಹಾರಾಷ್ಟ್ರ ಮೂಲದ ಗೋವಿಂದ ನಾರಾಯಣ ಖಂಡೇಕರ (40) ಎಂದು ಗುರುತಿಸಲಾಗಿದೆ. ಗುರುವಾರ ಹಾವೇರಿ ಶಹರ ಠಾಣೆಯಲ್ಲಿ ಕಳ್ಳತನ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು.

ಶವ ಎಸೆದು ಪರಾರಿ:ಮೀರಜ್‌ನಿಂದ ಚೆನ್ನೈಯತ್ತ ಹೊರಟಿದ್ದ ಸ್ಟೀಲ್‌ ತುಂಬಿದ ಲಾರಿಯನ್ನು ಖದೀಮರು ತಡೆದಿದ್ದಾರೆ. ಕೋಟ್ಯಂತರ ಮೌಲ್ಯದ ಸ್ಟೀಲ್ ಕಂಡ ಕಳ್ಳರು ಚಾಲಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ‌. ಚಾಲಕ ಸಾವಿಗೀಡಾದ ಬಳಿಕ ರಸ್ತೆ ಪಕ್ಕ ಶವ ಎಸೆದು ಪರಾರಿಯಾಗಿದ್ದಾರೆ. ಸುಮಾರು 13 ಟನ್ ಸ್ಟೀಲ್‌ ಅನ್ನು ಬೇರೆ ಲಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡರೂ ಕೂಡಾ ಖದೀಮರು ಹೊಸ ಹೊಸ ರೀತಿಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಮುಂಬೈಯಿಂದ ಚೆನ್ನೈ ನಗರಗಳಿಗೆ ತೆರಳಲು ಈ ಹೆದ್ದಾರಿ ಪ್ರಮುಖ ಕೊಂಡಿ. ಈ ರೀತಿ ಕೋಟ್ಯಂತರ ರೂಪಾಯಿ ಮೌಲ್ಯದ ಸರಕುಗಳನ್ನು ಸಾಗಿಸುವ ಲಾರಿಗಳನ್ನು ಖದೀಮರು ಟಾರ್ಗೆಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ:ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಹೆಡ್ ಕಾನ್ಸ್​ಟೇಬಲ್ ಸಾವು - ಕೊಲೆ ಶಂಕೆ

ನಿನ್ನೆ (ಜೂನ್​ 15) ಮಧ್ಯಾಹ್ನ ಟೌನ್​ ಪೊಲೀಸ್​ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಒಬ್ಬ ವ್ಯಕ್ತಿಯ ಮೃತದೇಹ ಸಿಕ್ಕಿರುವ ಮಾಹಿತಿ ಬಂದಿತ್ತು. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್​ಗೆ ದಾಖಲು ಮಾಡಲಾಗಿತ್ತು. ವ್ಯಕ್ತಿಯ ಗುರುತು ಪತ್ತೆಯಾಗಿದೆ. ಹೆಸರು ಗೋವಿಂದ ನಾರಾಯಣ ಖಂಡೇಕರ. ಮೀರಜ್‌ನಿಂದ ಚೆನ್ನೈಯತ್ತ ಹೊರಟಿದ್ದಾಗ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ತನಿಖೆ ಪ್ರಾರಂಭಿಸಿದ್ದೇವೆ ಎಂದು ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ತಿಳಿಸಿದ್ದಾರೆ.

ಇದನ್ನೂ ಓದಿ:ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಹೆಡ್ ಕಾನ್ಸ್​ಟೇಬಲ್ ಸಾವು - ಕೊಲೆ ಶಂಕೆ

ABOUT THE AUTHOR

...view details