ಕರ್ನಾಟಕ

karnataka

ETV Bharat / state

ಒಬ್ಬ ಎಂಎಲ್ಎ ಮಾಡಿರುವ ಆರೋಪಕ್ಕೆ ನಾನು ಉತ್ತರಿಸಬೇಕೇ: ಸಚಿವ ಜಗದೀಶ್ ಶೆಟ್ಟರ್ - Should I answer an allegation made by MLA

ಕೊರೊನಾ ನಿರ್ವಹಣೆ ಕುರಿತು ಸಿದ್ದರಾಮಯ್ಯನವರು ಕೇಳಲಿ ಉತ್ತರಿಸುವೆ. ಅದನ್ನ ಬಿಟ್ಟು ಒಬ್ಬ ಎಂಎಲ್ಎ ಮಾಡಿರುವ ಆರೋಪಕ್ಕೆ ನಾನು ಉತ್ತರಿಸಬೇಕೇ ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.

ಸಚಿವ ಜಗದೀಶ ಶೆಟ್ಟರ್
ಸಚಿವ ಜಗದೀಶ ಶೆಟ್ಟರ್

By

Published : Jul 22, 2020, 12:32 AM IST

ಹಾವೇರಿ: ಕೊರೊನಾ ನಿರ್ವಹಣೆ ಕುರಿತಂತೆ ಸಿದ್ದರಾಮಯ್ಯ ಕೇಳಲಿ ಉತ್ತರ ನೀಡುತ್ತೇನೆ. ಅದನ್ನ ಬಿಟ್ಟು ಒಬ್ಬ ಎಂಎಲ್ಎ ಮಾಡಿರುವ ಆರೋಪಕ್ಕೆ ನಾನು ಉತ್ತರಿಸಬೇಕು ಎಂದರೇ ಹೇಗೆ ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ಅಟ್ಟರ್ ಫ್ಲಾಪ್ ಆಗಿದೆ ಎಂಬ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಚಿಕ್ಕ ಚಿಕ್ಕ ನಗರಗಳಲ್ಲಿ ಟೌನ್ ಶಿಪ್​ ನಿರ್ಮಾಣ ಕುರಿತಂತೆ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ಟೌನ್ ಶಿಪ್ ನಿರ್ಮಾಣ ಮಾಡುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ABOUT THE AUTHOR

...view details