ಹಾವೇರಿ :ಜೂನ್ 23 ರಂದು ಸರ್ಕಾರ ಒಂದೇ ದಿನ ಎರಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿಪಡಿಸಿದ್ದು, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಗೊಂದಲಕ್ಕೀಡಾಗಿದ್ದಾರೆ.
ಒಂದೇ ದಿನ 2 ಪರೀಕ್ಷೆ: ಗೊಂದಲದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು - kannadanews
ಜೂನ್ 23 ರಂದು ಸರ್ಕಾರ ಒಂದೇ ದಿನ ಎರಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿ ಪಡಿಸಿದ್ದು, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಇದೇ 23 ರಂದು ಒಂದೇ ದಿನ ಪಿಡ್ಬ್ಲ್ಯೂಡಿ ಇಲಾಖೆ ಮತ್ತು ಕಾರಾಗೃಹ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ ನಿಗದಿ ಪಡಿಸಲಾಗಿದ್ದು, ಪರೀಕ್ಷೆಯನ್ನ ಒಂದೇ ದಿನ ಇಟ್ಟಿದ್ದರಿಂದ ಎರಡು ಇಲಾಖೆಯಲ್ಲಿ ಪರೀಕ್ಷೆ ಬರೆಯುವ ಹಲವು ಅಕಾಂಕ್ಷೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಹಾವೇರಿಯಲ್ಲಿ ವಿದ್ಯಾರ್ಥಿ ಬಸವರಾಜ್ ಈ ರೀತಿ ಒಂದೇ ದಿನ ಪರೀಕ್ಷೆ ಇಟ್ಟಿರುವುದರಿಂದ ನಮಗೆ ಎರಡು ಪರೀಕ್ಷೆಗಳಲ್ಲಿ ಬರೆಯುವ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸರ್ಕಾರ ಎರಡು ಇಲಾಖೆಗಳ ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕದಂತೆ ನಿಗದಿ ಮಾಡಬೇಕು. ಆ ಮೂಲಕ ನಿರುದ್ಯೋಗಿಗಳ ನೆರವಿಗೆ ಧಾವಿಸಬೇಕು ಎಂದು ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಒತ್ತಾಯಿಸಿದ್ದಾರೆ.