ಕರ್ನಾಟಕ

karnataka

ಹಾವೇರಿಯಲ್ಲಿ 28, ಉತ್ತರ ಕನ್ನಡ ಜಿಲ್ಲೆಯಲ್ಲಿ 25 ಮಂದಿಗೆ ಇಂದು ಕೋವಿಡ್​ ಸೋಂಕು

By

Published : Oct 31, 2020, 11:42 PM IST

ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೊರೊನಾ ಪ್ರಕರಣಗಳ ವರದಿ ಇಲ್ಲಿದೆ.

Report of Corona cases in Haveri
ಹಾವೇರಿ ಜಿಲ್ಲೆಯ ಕೊರೊನಾ ಪ್ರಕರಣಗಳ ವರದಿ

ಹಾವೇರಿ: ಜಿಲ್ಲೆಯಲ್ಲಿ ಶನಿವಾರ 28 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 10492 ಕ್ಕೇರಿದಂತಾಗಿದೆ. ಜಿಲ್ಲೆಯಲ್ಲಿ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಶನಿವಾರ 25 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 1, ಹಾನಗಲ್ ಮತ್ತು ಹಾವೇರಿ ತಾಲೂಕಿನಲ್ಲಿ ತಲಾ 07 ಜನರಿಗೆ ಕೊರೊನಾ ದೃಢಪಟ್ಟಿದೆ. ಹಿರೇಕೆರೂರು ಶಿಗ್ಗಾವಿ ತಾಲೂಕಿನಲ್ಲಿ ತಲಾ 04, ರಾಣೆಬೆನ್ನೂರು ತಾಲೂಕಿನಲ್ಲಿ 05 ಜನರಿಗೆ ಕೊರೊನಾ ತಗುಲಿದೆ. ಜಿಲ್ಲೆಯಲ್ಲಿ 215 ಜನ ಹೋಂ ಐಸೋಲೇಷನ್​ನಲ್ಲಿದ್ದು, 38 ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 25 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,929ಕ್ಕೆ ಏರಿಕೆಯಾಗಿದೆ. ಕಾರವಾರದಲ್ಲಿ 6, ಅಂಕೋಲಾ, ಸಿದ್ದಾಪುರದಲ್ಲಿ ತಲಾ 1, ಕುಮಟಾ, ಹಳಿಯಾಳದಲ್ಲಿ ತಲಾ 4, ಹೊನ್ನಾವರ, ಶಿರಸಿ, ಯಲ್ಲಾಪುರದಲ್ಲಿ ತಲಾ 2, ಭಟ್ಕಳದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಕಾರವಾರ, ಕುಮಟಾದಲ್ಲಿ ತಲಾ 4, ಹೊನ್ನಾವರದಲ್ಲಿ 3, ಭಟ್ಕಳದಲ್ಲಿ 1, ಶಿರಸಿಯಲ್ಲಿ 14, ಯಲ್ಲಾಪುರದಲ್ಲಿ 10, ಒಟ್ಟು 36 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 255 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದರೆ, 554 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 809 ಸಕ್ರಿಯ ಪ್ರಕರಣಗಳು ಸದ್ಯ ಜಿಲ್ಲೆಯಲ್ಲಿದ್ದು, ಒಟ್ಟು 164 ಮಂದಿ ಮೃತಪಟ್ಟಿದ್ದಾರೆ.

ABOUT THE AUTHOR

...view details