ರಾಣೆಬೆನ್ನೂರು (ಹಾವೇರಿ):ನಗರದಲ್ಲಿ ಕಳೆದ ಎರಡು ದಿನಗಳಿಂದ ತೆರೆದಿರುವ ಬಟ್ಟೆ ಮತ್ತು ಬಂಗಾರದಂಗಡಿಗಳನ್ನು ಬಂದ್ ಮಾಡಿಸುವಂತೆ ರಾಣೆಬೆನ್ನೂರು ಸಾರ್ವಜನಿಕರು ವಾಟ್ಸ್ ಆ್ಯಪ್ನಲ್ಲಿ ಅಧಿಕಾರಿಗಳಿಗೆ ಮನವಿ ಮಾಡುತ್ತಿರುವುದು ಕಂಡುಬಂದಿದೆ.
ಬಟ್ಟೆ, ಬಂಗಾರದಂಗಡಿ ಬಂದ್ ಮಾಡಿಸುವಂತೆ ಸಾರ್ವಜನಿಕರಿಂದ ವಾಟ್ಸ್ಆ್ಯಪ್ನಲ್ಲಿ ಒತ್ತಾಯ - Haveri green zone
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಕಂಡುಬರದ ಹಿನ್ನೆಲೆ ಲಾಕ್ಡೌನ್ ಆದೇಶವನ್ನು ಕೊಂಚಮಟ್ಟಿಗೆ ಸಡಿಲಿಸಲಾಗಿದೆ. ಅಲ್ಲದೆ ಕೆಲವು ಅಂಗಡಿಗಳನ್ನು ಷರತ್ತಿನ ಮೇಲೆ ತೆರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ರಾಣೆಬೆನ್ನೂರಿನ ಕೆಲವು ಬಟ್ಟೆ ಹಾಗೂ ಚಿನ್ನದ ಅಂಗಡಿಗಳು ತೆರೆಯಲಾಗಿದ್ದು, ಇಲ್ಲಿ ಜನಸಂದಣಿ ಉಂಟಾಗಿರುವುದು ವರದಿಯಾಗಿದೆ. ಇಂತಹ ಅಂಗಡಿಗಳನ್ನು ಬಂದ್ ಮಾಡುವಂತೆ ವಾಟ್ಸ್ ಆ್ಯಪ್ ಮೂಲಕ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈಗ ರಾಣೆಬೆನ್ನೂರಿನ ಸಾರ್ವಜನಿಕರು ಅಂಗಡಿಗಳನ್ನು ಬಂದ್ ಮಾಡಿಸುವಂತೆ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಅಧಿಕಾರಿಗಳಿಗೆ ಆಗ್ರಹಿಸುತ್ತಿದ್ದಾರೆ. ಪಕ್ಕದ ಜಿಲ್ಲೆ ದಾವಣಗೆರೆಯಲ್ಲಿ ಈಗಾಗಲೇ 10 ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಅಲ್ಲದೇ ನೆರೆಯ ಜಿಲ್ಲೆಯ ಜನರು ಇಲ್ಲಿ ಬಟ್ಟೆ ಖರೀದಿಸಲು ಆಗಮಿಸುತ್ತಿದ್ದಾರೆ. ಇದರಿಂದ ಇಲ್ಲಿ ಕೊರೊನಾ ಹರಡಬಹುದು ಎಂಬ ಭಯದಲ್ಲಿ ಸಾರ್ವಜನಿಕರಿದ್ದಾರೆ. ಅಲ್ಲದೆ ಬಟ್ಟೆ ಮತ್ತು ಬಂಗಾರದ ಅಂಗಡಿಗಳಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಜನರು ಖರೀದಿಗೆ ಮುಂದಾಗುತ್ತಿದ್ದು, ಅಂಗಡಿಯವರು ಇದರ ಬಗ್ಗೆ ಗಮನ ಹರಿಸದಿರುವುದು ಜನರ ಆತಂಕಕ್ಕೆ ಕಾರಣ.