ಹಾವೇರಿ: ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ, ಬಿಜೆಪಿ ಪಕ್ಷದಲ್ಲಿಯೇ ಮುಂದುವರೆಯುತ್ತೇನೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಹೇಳಿದರು. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷದ ಬಗ್ಗೆಯೂ ನನಗೆ ಒಲವಿಲ್ಲಾ. ಪ್ರಚಾರಕ್ಕೆ ನನ್ನನ್ನು ಯಾರು ಕರೆದಿಲ್ಲ. ಹೀಗಾಗಿ ಮನೆಯಲ್ಲಿಯೇ ಇದ್ದೀನಿ. ಬಿಜೆಪಿ ಪರವಾಗಿದ್ದೇನೆ ಎಂದು ಓಲೇಕಾರ್ ಸ್ಪಷ್ಟಪಡಿಸಿದರು.
ಬೊಮ್ಮಾಯಿ ಕರೆದರೆ ಪ್ರಚಾರಕ್ಕೆ ಹೋಗುತ್ತೇನೆ - ಓಲೇಕಾರ್: ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಬೇಡ ಎಂದಿದ್ದಾರಂತೆ. ಬೊಮ್ಮಾಯಿ ಕರೆದರೆ ಪ್ರಚಾರಕ್ಕೆ ಹೋಗುತ್ತೇನೆ ಎಂದರು. ಒಂದು ಪಕ್ಷದಲ್ಲಿದ್ದುಕೊಂಡು ಇನ್ನೊಂದು ಪಕ್ಷಕ್ಕೆ ಹೋಗಿ ಪಕ್ಷ ಕಟ್ಟುವುದು ಸುಲಭದ ಮಾತಲ್ಲ. ಒಂದು ಪಕ್ಷದಲ್ಲಿ ಇದ್ದು ಸಂಘಟನೆ ಮಾಡಿದ ಮೇಲೆ ಅಲ್ಲಿಯೇ ಇದ್ದರೆ ಗೌರವ, ಬೆಲೆ ಇರುತ್ತೆ. ಹೀಗಾಗಿ ಪದೆ ಪದೇ ಪಕ್ಷ ಬದಲಾವಣೆ ಮಾಡಿದರೇ ಗೌರವ ಬೆಲೆ ಇರುವುದಿಲ್ಲಾ ಎಂದು ನನ್ನ ಗಮನಕ್ಕೆ ಬಂತು. ಹಾಗಾಗಿ ನಾನು ಪಕ್ಷದಲ್ಲೇ ಉಳಿದುಕೊಂಡಿದ್ದೇನೆ ಎಂದರು.
ಇದನ್ನೂ ಓದಿ:ಮತ್ತೆ ಗೆಲ್ತಾರಾ ಹೆಬ್ಬಾಳ್ಕರ್, ಜೊಲ್ಲೆ, ನಿಂಬಾಳ್ಕರ್..? ರತ್ನಾ ಕೊರಳಿಗೆ ಬೀಳುತ್ತಾ ವಿಜಯದ ಮಾಲೆ?
ನನ್ನ ಸ್ನೇಹಿತರ ಬಳಗ ಎಲ್ಲರೂ ಸೇರಿ ನೀವು ಇಲ್ಲಿಯೇ ಉಳಿದುಕೊಳ್ಳುವಂತೆ ಒತ್ತಾಯ ಮಾಡಿದ್ದರಿಂದ ನಾನು ಇಲ್ಲಿಯೇ ಉಳಿದುಕೊಂಡಿದ್ದೇನೆ. ನನ್ನ ಹಿಂಬಾಲಕರು ಯಾರು ಸಂಧಾನಕ್ಕೆ ಹೋಗಿಲ್ಲ. ಅವರೇ ನನ್ನ ಕರೆಯಬೇಡಿ ಎಂದಿದ್ದಾರಂತೆ. ಹೀಗಾಗಿ ನಾನು ಪ್ರಚಾರಕ್ಕೆ ಹೋಗಿಲ್ಲಾ. ಟಿಕೆಟ್ ನೀಡಲಿಲ್ಲಾ, ಪ್ರಚಾರಕ್ಕೂ ಸಹ ಕರೆದಿಲ್ಲಾ ಯಾಕೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಸವರಾಜ ಬೊಮ್ಮಾಯಿ ಸಿಎಂ ಆಗುವ ಮೊದಲು ನನಗೆ ಕರೆ ಮಾಡಿದ್ದರು. ಆಗ ನಮ್ಮ ಜಿಲ್ಲೆಯವರು ಸಿಎಂ ಆಗುತ್ತಿರುವುದು ಸಂತಸ ತಂದಿದೆ. ನಿಮ್ಮನ್ನೇ ಬೆಂಬಲಿಸುತ್ತೇನೆ ಎಂದು ಹೇಳಿದ್ದೆ ಎಂದರು.
ಮೋಸ, ಅನ್ಯಾಯ ಮಾಡುವಂತದ್ದಕ್ಕೆ ದೇವರೇ ಪಾಠ ಕಲಿಸುತ್ತಾನೆ - ಓಲೇಕಾರ್:ಆದರೆ ಅವರು ಸಿಎಂ ಆದ ಮೇಲೆ ಅವರ ನಿಲುವು ನಿರ್ಧಾರಗಳು ಬದಲಾವಣೆ ಮಾಡುತ್ತಾರೆ ಎಂದರೆ ಅದು ಭಗವಂತನ ಇಚ್ಛೆ, ದೇವರೇ ಅವರಿಗೆ ಪಾಠ ಕಲಿಸಬೇಕು. ಇದು ಬಹಳ ದಿನ ನಡೆಯುವುದಿಲ್ಲ. ಈ ರೀತಿ ಮೋಸ, ಅನ್ಯಾಯ ಮಾಡುವಂತದ್ದಕ್ಕೆ ದೇವರೇ ಪಾಠ ಕಲಿಸುತ್ತಾನೆ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಬಸವರಾಜ ಬೊಮ್ಮಾಯಿ ನನ್ನನ್ನು ಪ್ರಚಾರಕ್ಕೆ ಕರೆಯಬೇಡಿ ಎಂದಿದ್ದಾರೆ. ಅವರು ಕರೆದರೆ ಮಾತ್ರ ಪ್ರಚಾರಕ್ಕೆ ಹೋಗುತ್ತೇನೆ. ಇಷ್ಟೆಲ್ಲಾ ಬೆಳವಣಿಗೆಯಾದರೂ ಸಹ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನನ್ನ ಜೊತೆ ಮಾತನಾಡಿಲ್ಲ ಎಂದು ನೆಹರು ಓಲೇಕಾರ್ ಇದೇ ಸಂದರ್ಭದಲ್ಲಿ ಬೆಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಲಿಂಗಾಯತ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಆತ್ಮ ಕಲುಕುವ ಹೇಳಿಕೆ ಕೊಟ್ಟಿದ್ದಾರೆ: ಸಿಎಂ ಬೊಮ್ಮಾಯಿ