ಹಾವೇರಿ: ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ನವೀನ್ ಮೃತದೇಹ ನೀಡಲು ಕುಟುಂಬ ನಿರ್ಧರಿಸಿದೆ. ಈ ಮೂಲಕ ಮಗನ ಮುಖ ನೋಡುತ್ತೇವೋ ಇಲ್ಲವೋ ಎಂಬ ನೋವಿನಲ್ಲೇ ದಿನ ದೂಡುತ್ತಿದ್ದ ಕುಟುಂಬ ಈಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈಟಿವಿ ಭಾರತದಜೊತೆ ಮೃತ ನವೀನ ತಂದೆ ಶೇಖರಗೌಡ ಈ ಬಗ್ಗೆ ಮಾಹಿತಿ ನೀಡಿದ್ದು, ಮಗನ ಪಾರ್ಥೀವ ಶರೀರ ಬರುವುದು ತಡವಾಗಿದ್ದಕ್ಕೆ ನಿರಾಶೆ ಆಗಿತ್ತು. ಮಗನ ಪಾರ್ಥೀವ ಶರೀರ ಬರುವ ವಿಚಾರ ಕೇಳಿದ ನಂತರ ನಿರಾಶೆ ದೂರವಾಗಿದೆ. ಮೃತದೇಹ ಸೋಮವಾರ ಚಳಗೇರಿಗೆ ಆಗಮಿಸಲಿದೆ. ಈ ವಿಷಯವನ್ನ ಭಾರತೀಯ ರಾಯಭಾರಿ ಕಚೇರಿಯವರು ತಿಳಿಸಿದ್ದಾರೆ ಎಂದ ಅವರು, ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಟಾಲಿನ್ ಸರ್ಕಾರದ ಬಜೆಟ್: ಶಿಕ್ಷಣ, ಪ್ರವಾಹ ತಡೆಗೆ ಆದ್ಯತೆ, ರೈತರ ಸಾಲ ಮನ್ನಾ ಘೋಷಣೆ
ಸೋಮವಾರ ಬೆಳಗ್ಗೆ ಚಳಗೇರಿ ಗ್ರಾಮದ ಮನೆಗೆ ಮೃತದೇಹ ಬರುವ ಮಾಹಿತಿ ದೊರೆತಿದೆ. ಇಪ್ಪತ್ತೊಂದು ದಿನಗಳ ನಂತರ ಮಗನ ಪಾರ್ಥೀವ ಶರೀರ ಬರಲಿದೆ. ಈ ಕಾರ್ಯಕ್ಕೆ ಶ್ರಮಪಟ್ಟ ಎಲ್ಲರಿಗೂ ಧನ್ಯವಾದಗಳು.