ಕರ್ನಾಟಕ

karnataka

ETV Bharat / state

ಜಿಲ್ಲಾಸ್ಪತ್ರೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡ ಶಾಸಕ ನೆಹರು ಓಲೇಕಾರ್ - ನೆಹರು ಓಲೇಕಾರ್

ಜಿಲ್ಲಾಸ್ಪತ್ರೆಗೆ ಅಧಾರ್ ಕಾರ್ಡ್ ತಗೆದುಕೊಂಡು ಬಂದು ಲಸಿಕೆ ಹಾಕಿಸಿಕೊಳ್ಳಬಹುದು. ಇನ್ನು ಹಣ ಇದ್ದವರು ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿ ನೀಡಿ ಲಸಿಕೆ ಪಡೆಯುವಂತೆ ನೆಹರು ಓಲೇಕಾರ್ ಹೇಳಿದರು.

mla Nehru Olekar received the covaccine news
ಕೊವ್ಯಾಕ್ಸಿನ್ ಲಸಿಕೆ ಪಡೆದ ಶಾಸಕ ನೆಹರು ಓಲೇಕಾರ್

By

Published : Mar 13, 2021, 8:10 PM IST

ಹಾವೇರಿ: ಜಿಲ್ಲಾಸ್ಪತ್ರೆಗೆ ಆಗಮಿಸಿದ ಶಾಸಕ ನೆಹರು ಓಲೇಕಾರ್, ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡು 30 ನಿಮಿಷಗಳ ಕಾಲ ಆಸ್ಪತ್ರೆಯ ಬೆಡ್ ಮೇಲೆ ವಿಶ್ರಾಂತಿ ಪಡೆದರು.

ಕೊವ್ಯಾಕ್ಸಿನ್ ಲಸಿಕೆ ಪಡೆದ ಶಾಸಕ ನೆಹರು ಓಲೇಕಾರ್

ಓದಿ: ರಾಜ್ಯದ ಪ್ರವಾಸಿ ತಾಣಗಳಲ್ಲಿ ಕೊರೊನಾ ಹರಡದಂತೆ ಕ್ರಮ : ಸಚಿವ ಸಿ ಪಿ ಯೋಗೇಶ್ವರ್

ನಂತರ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದೆ. ಜನ ವ್ಯಾಕ್ಸಿನ್ ಬಗ್ಗೆ ಭಯ ಪಡದೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.

ಜನಸಾಮಾನ್ಯರಿಗೆ ಈ ಬಗ್ಗೆ ತಪ್ಪು ಕಲ್ಪನೆ ಇದೆ. ಇವೆಲ್ಲವುಗಳಿಂದ ಹೊರಗೆ ಬಂದು ಜನಸಾಮಾನ್ಯರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು. ಜಿಲ್ಲಾಸ್ಪತ್ರೆಗೆ ಅಧಾರ್ ಕಾರ್ಡ್ ತಗೆದುಕೊಂಡು ಬಂದು ಲಸಿಕೆ ಹಾಕಿಸಿಕೊಳ್ಳಬಹುದು. ಇನ್ನು ಹಣ ಇದ್ದವರು ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿ ನೀಡಿ ಲಸಿಕೆ ಪಡೆಯುವಂತೆ ನೆಹರು ಓಲೇಕಾರ್ ಹೇಳಿದರು.

ಲಸಿಕೆ ಹಾಕಿಸಿಕೊಂಡು ಮಾಂಸಾಹಾರ ಸೇವಿಸಬಾರದು, ಮದ್ಯ ಕುಡಿಯಬಾರದು ಎಂದು ಜನ ತಪ್ಪು ತಿಳಿದುಕೊಂಡಿದ್ದಾರೆ. ಅದೆಲ್ಲಾ ಸುಳ್ಳು. ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಂಡು ಕೊರೊನಾ ಓಡಿಸಬೇಕು ಎಂದರು.

ABOUT THE AUTHOR

...view details