ರಾಣೆಬೆನ್ನೂರು/ಹಾವೇರಿ: ಸುಡಗಾಡ ಸಿದ್ದ ಹಾಗೂ ಹಕ್ಕಿಪಿಕ್ಕಿ ಸಮುದಾಯದ ಕುಟುಂಬಗಳಿಗೆ ಒಂದು ವರ್ಷದೊಳಗೆ ಮನೆ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಅರುಣಕುಮಾರ ಪೂಜಾರ ಭರವಸೆ ನೀಡಿದರು.
ಹಕ್ಕಿಪಿಕ್ಕಿ ಜನಕ್ಕೆ ಒಂದು ವರ್ಷದಲ್ಲಿ ಮನೆ ನಿರ್ಮಾಣ.. ಶಾಸಕ ಅರುಣಕುಮಾರ ಭರವಸೆ
ರಾಣೆಬೆನ್ನೂರು ವ್ಯಾಪ್ತಿಯ ಹಕ್ಕಿಪಿಕ್ಕಿ ಜನಕ್ಕೆ ಒಂದು ವರ್ಷದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಅರುಣಕುಮಾರ ಭರವಸೆ ನೀಡಿದ್ದಾರೆ.
ಇಂದು ಅಡವಿ ಆಂಜನೇಯ ಬಡಾವಣೆಯಲ್ಲಿ ಸುಡಗಾಡು ಸಿದ್ದ ಜೋಪಡಿಯಲ್ಲಿ ಸಿಹಿ ವಿತರಣೆ ಮಾಡಿ ಮಾತನಾಡಿದರು. ಬಳಿಕ ಜೋಪಡಿಗಳನ್ನು ವೀಕ್ಷಣೆ ಮಾಡಿದ ಶಾಸಕರು ತಾಲೂಕಿಗೆ 5 ಸಾವಿರ ಮನೆಗಳು ಅವಶ್ಯಕತೆ ಇದ್ದು, ಅವುಗಳನ್ನು ಸರ್ಕಾರದ ವಸತಿ ಸಚಿವರ ಮೂಲಕ ಮನವಿ ಮಾಡಿಕೊಂಡು ಇಲ್ಲಿನ ಜನರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದರು. ಇದೇ ಜಾಗದಲ್ಲಿ ಅವರಿಗೆ ಮನೆ ನಿರ್ಮಾಣ ಮಾಡಲು ಈಗಾಗಲೇ ನಗರಸಭೆ ಪೌರಾಯುಕ್ತರಿಂದ ಮಾಹಿತಿ ತೆಗೆದುಕೊಳ್ಳಲಾಗಿದೆ. ಇಲ್ಲಿರುವ ಜೋಪಡಿಗಳನ್ನು ತೆರವುಗೊಳಿಸಿ ಅವರಿಗೆ ವಿಶೇಷ ಮನೆಗಳನ್ನು ಕಟ್ಟಿಕೊಡಲಾಗುವುದು ಎಂದು ತಿಳಿಸಿದ್ರು.
ಈಗಾಗಲೇ ಇಲ್ಲಿ ಜಾಗ ಹಂಚಿಕೆ ಮಾಡಿರುವ ಕುಟುಂಬಗಳಿಗೆ ಮನೆ ಕಟ್ಟಿಕೊಡಲು ವಸತಿ ಸಚಿವರಾದ ವಿ ಸೋಮಣ್ಣನವರ ಹತ್ತಿರ ಮಾತನಾಡಲಾಗಿದೆ ಎಂದು ತಿಳಿಸಿದರು. ಇಲ್ಲಿನ ಜನಾಂಗಕ್ಕೆ ಇನ್ನೊಂದು ವರ್ಷದೊಳಗೆ ಮನೆ ನಿರ್ಮಾಣ ಮಾಡುವ ಮೂಲಕ ನಾನೇ ನಿಮಗೆ ಸಿಹಿ ವಿತರಣೆ ಮಾಡುತ್ತೇನೆ ಎಂದು ಜನರಿಗೆ ಆಶ್ವಾಸನೆ ನೀಡಿದರು.