ಹಾವೇರಿ: ನಾವು ರಾಜೀನಾಮೆ ಕೊಟ್ಟು ಬಿಜೆಪಿಗೆ ಬರದೇ ಹೋಗದಿದ್ದರೆ ಹಾವೇರಿ ಜಿಲ್ಲೆಯ ಮೆಗಾ ಡೈರಿ ಕನಸು ಆಗುತ್ತಿರಲಿಲ್ಲವೇನೋ. ನಮ್ಮ ರಾಜೀನಾಮೆಯಿಂದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು ಮತ್ತೊಂದು ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಅಭಿಪ್ರಾಯ ಪಟ್ಟರು.
ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದಲ್ಲಿ ಇಂದು ನಡೆದ ಮೆಗಾ ಡೈರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜೀವನ ಸಾರ್ಥಕವಾಯಿತು ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಡೀಸೆಲ್ ರೇಟ್ ಬಹಳ ಎತ್ತರದಲ್ಲಿದೆ. ರೈತರ ಟ್ರ್ಯಾಕ್ಟರ್ಗೆ ಬಳಕೆಯಾಗುವ ಡೀಸೆಲ್ಗೆ ರಿಯಾಯಿತಿ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಳಿದ್ದೆ. ಇದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದರು.