ಹಾವೇರಿ:ತಾವು ಮಾಡಿದ ತಪ್ಪಿಗೆ ಜೈಲಿಗೆ ಹೋಗಿ ಅದನ್ನು ಬಿಜೆಪಿ ಮೇಲೆ ಹಾಕಿದರೆ ಹೇಗೆ ಎಂದು ಬಿಜೆಪಿ ಸೇರದಿರೋದಕ್ಕೆ ಜೈಲಿಗೆ ಹಾಕಿದರು ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ವಿರುದ್ಧ ಕೃಷಿ ಸಚಿವ ಬಿ.ಸಿ. ಪಾಟೀಲ್ ಕಿಡಿಕಾರಿದ್ದಾರೆ.
ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿಂದು ಮಾತನಾಡಿದ ಅವರು, ತಾವು ಮಾಡಿದ ತಪ್ಪಿಗೆ, ತಮ್ಮ ಅಕ್ರಮಕ್ಕಾಗಿ ಡಿಕೆಶಿ ಜೈಲು ಸೇರಿದ್ದರು. ಅದನ್ನು ಬಿಜೆಪಿ ಮ್ಯಾಲೇಕೆ ಹಾಕೋದು ಎಂದು ಪ್ರಶ್ನಿಸಿದರು.
ಬಿಜೆಪಿ ಸೇರದವರನ್ನೆಲ್ಲ ಜೈಲಿಗೆ ಕಳಿಸೋಕೆ ಆಗಿದೆಯಾ.? ಎಲುಬಿಲ್ಲದ ನಾಲಿಗೆ ಏನು ಮಾತನಾಡಿದ್ರೂ ಜನರು ನಂಬುವಷ್ಟು ದಡ್ಡರಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಹರಿಹಾಯ್ದರು.
ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ವಿಚಾರ ಕುರಿತಂತೆ ಮಾತನಾಡಿದ ಅವರು, ಹೊಂದಾಣಿಕೆ ಪ್ರಶ್ನೆ ಇಲ್ಲ. ಕಳೆದ ಬಾರಿಯೂ ಇಲ್ಲಿ ಒಂದೇ ಅಭ್ಯರ್ಥಿ ಹಾಕಿದ್ವಿ. ಈ ಬಾರಿಯೂ ಒಬ್ಬರೇ ಅಭ್ಯರ್ಥಿಯನ್ನು ಹಾಕಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಾರಾಣಸಿಯಲ್ಲಿ ಬಿಜೆಪಿಯಿಂದ ಮೆಗಾ ಕಾರ್ಯಕ್ರಮ.. ಡಿ.13ರ ನಮೋ ವಾರಾಣಸಿ ಪ್ರವಾಸಕ್ಕೆ 12 ಸಿಎಂಗಳು ಸಾಥ್
ಪ್ರಧಾನಿ ಮೋದಿಯವರು ಜಗತ್ತಿನ ಪ್ರಭಾವಿ ನಾಯಕರು. ಮಾಜಿ ಪ್ರಧಾನಿ ದೇವೇಗೌಡರು ಅನುಭವಿ ರಾಜಕಾರಣಿ. ಅವರು ಹೇಳಿದ್ದರಲ್ಲಿ ಅರ್ಥ ಇರುತ್ತೆ. ದೇವೇಗೌಡರು ವಾಸ್ತವಾಂಶವನ್ನೇ ಹೇಳಿದ್ದಾರೆ ಎಂದು ಬಿ.ಸಿ. ಪಾಟೀಲ್ ತಿಳಿಸಿದರು.
ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು, ಬಿಜೆಪಿ ಮತ್ತು ಜೆಡಿಎಸ್ ಅಥವಾ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಯಾರೇ ಹೊಂದಾಣಿಕೆ ಮಾಡಿಕೊಂಡ್ರೂ ಅದು ಹೊಂದಾಣಿಕೆಯೇ ಎಂದರು.