ಕರ್ನಾಟಕ

karnataka

ETV Bharat / state

2023ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಸಚಿವ ಶ್ರೀನಿವಾಸ ಪೂಜಾರಿ

ಎಲ್ಲಾ ರಾಜಕೀಯ ಪಕ್ಷಗಳಿಗೆ ಮಾದರಿಯಾಗಿ, ದೇಶಕ್ಕೆ ಮಾದರಿಯಾಗಿರುವಂತಹ ಸಂಘಟನಾತ್ಮಕವಾದಂತಹ ಸಮಾವೇಶಗಳನ್ನು ನಾವೂ ಮಾಡಿದ್ದೇವೆ - ಸಚಿವ ಕೋಟ ಶ್ರೀನಿವಾಸ್​ಪೂಜಾರಿ.

Kn_hvr_01_kota_utsva_7202143
ಕೋಟ ಶ್ರೀನಿವಾಸ ಪೂಜಾರಿ

By

Published : Aug 6, 2022, 8:04 PM IST

ಹಾವೇರಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮಗೆ 75 ವರ್ಷ ಆಯಿತು ಎಂದು ಒಂದು ಖಾಸಗಿ ಉತ್ಸವ ಮಾಡಿಕೊಂಡಿದ್ದಾರೆ. ಉತ್ಸವಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲಾ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಿದ್ದರಾಮಯ್ಯ ಹುಟ್ಟುಹಬ್ಬ ಹೆಸರಿನಲ್ಲಿ ರಾಜಕೀಯ ಸಮಾವೇಶ ಮಾಡಿದ್ದಾರೆ. ನಮ್ಮ ದೃಷ್ಠಿಯಲ್ಲಿ ಅದು ಅಷ್ಟಕ್ಕೆ ಸೀಮಿತ. ಸಮಾವೇಶ ಸಮಾವೇಶವೇ ಹೊರತು ರಾಜಕೀಯ ತೀರ್ಮಾನ ಮಾಡುವುದಿಲ್ಲಾ ಎಂದು ಪೂಜಾರಿ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡಿದರೂ ಅಂತಾ ನಾವು ಯಾವುದೇ ಉತ್ಸವ ಮಾಡುವದಿಲ್ಲ. ಬದಲಿಗೆ ನಮ್ಮ ಪಕ್ಷ ಈವರೆಗೆ ಮಾಡಿಕೊಂಡು ಬಂದಿರುವ ಉತ್ಸವಗಳನ್ನ ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಕೋಟ ಶ್ರೀನಿವಾಸ ಪೂಜಾರಿ

ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ:ನಗರದಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು. ಬಿಜೆಪಿಯ ಸಂಘಟನಾತ್ಮಕ ಹೋರಾಟ, ಸೈದ್ದಾಂತಿಕ ಹೋರಾಟ, ರಾಜ್ಯ ಮತ್ತು ಕೇಂದ್ರಸರ್ಕಾರದ ಸಾಧನೆ, ಸಿಎಂ ಬಸವರಾಜ ಬೊಮ್ಮಾಯಿ ಪರಿಶ್ರಮ, ಯಡಿಯೂರಪ್ಪ ನೇತೃತ್ವ, ಅಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಸಂಘಟನಾತ್ಮಕ ಶಕ್ತಿ ಇಟ್ಟುಕೊಂಡು ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇದನ್ನೂ ಓದಿ:ಅಮಿತ್ ಶಾ ರಾಜ್ಯಕ್ಕೆ ಬಂದರೂ ಅತಿವೃಷ್ಟಿಗೆ ಪರಿಹಾರ ಕೇಳದ ಬಿಜೆಪಿಯಿಂದ ಅನ್ಯಾಯ: ಯು ಟಿ ಖಾದರ್

ABOUT THE AUTHOR

...view details