ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಅಕ್ರಮ ಮದ್ಯಕ್ಕೆ ಬ್ರೇಕ್​: ಈವರೆಗೆ 122.250 ಲೀಟಲ್ ಮದ್ಯ ವಶ - ಅಕ್ರಮ ಮದ್ಯ ಮಾರಟ

ಲಾಕ್​ಡೌನ್ ಘೋಷಣೆಯಾದ ಬಳಿಕ ಹಾವೇರಿಯಲ್ಲಿ 477 ಬಾರಿ ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ಮಾಡಲಾಗಿದೆ. ಇದರಲ್ಲಿ 324 ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಹಾವೇರಿ ಅಬಕಾರಿ ಡಿಸಿ ಡಾ.ಮಹಾದೇವಿಬಾಯಿ ತಿಳಿಸಿದ್ದಾರೆ.

Illigle liquor trade in Haveri: 122.250 liters of liquor seized till now
ಹಾವೇರಿಯಲ್ಲಿ ಅಕ್ರಮ ಮದ್ಯಕ್ಕೆ ಬ್ರೇಕ್​: ಈವರೆಗೆ 122.250 ಲೀಟಲ್ ಮದ್ಯ ವಶ

By

Published : Apr 22, 2020, 10:58 PM IST

ಹಾವೇರಿ:ರಾಜ್ಯದಲ್ಲಿ ಲಾಕ್​ಡೌನ್ ಆದೇಶ ಜಾರಿಯಾದ ಬಳಿಕ ಅಕ್ರಮ ಮದ್ಯ ಮಾರಾಟ ಹಾಗೂ ಕಳ್ಳಭಟ್ಟಿ ದಂಧೆ ವರದಿಯಾಗುತ್ತಿದೆ. ಇದೀಗ ಹಾವೇರಿಯಲ್ಲಿ ಕಳೆದ ತಿಂಗಳ 24ರಿಂದ ಈವರೆಗೆ ಒಟ್ಟು 477 ಬಾರಿ ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ಮಾಡಲಾಗಿದೆ.

ಹಾವೇರಿಯಲ್ಲಿ ಅಕ್ರಮ ಮದ್ಯಕ್ಕೆ ಬ್ರೇಕ್​: ಈವರೆಗೆ 122.250 ಲೀಟಲ್ ಮದ್ಯ ವಶ

ಅದರಲ್ಲಿ 324 ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಹಾವೇರಿ ಅಬಕಾರಿ ಡಿಸಿ ಡಾ.ಮಹಾದೇವಿಬಾಯಿ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ 31 ಪ್ರಕರಣಗಳನ್ನು ದಾಖಲಿಸಿದ್ದು 18 ಜನ ಆರೋಪಿಗಳನ್ನ ಬಂಧಿಸಿರುವುದಾಗಿ ತಿಳಿಸಿದರು.

ದಾಳಿ ವೇಳೆ 122.250 ಲೀಟಲ್ ಮದ್ಯ ಹಾಗೂ 36.300 ಲೀಟರ್ ಬೀರ್ ವಶಪಡಿಸಿಕೊಂಡಿರುವುದಾಗಿ ತಿಳಿಸಿದರು. ಕೊರೊನಾ ಹರಡದಂತೆ ಸರ್ಕಾರ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ ಎಂದು ಮಹಾದೇವಿಬಾಯಿ ತಿಳಿಸಿದರು.

ABOUT THE AUTHOR

...view details