ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ವರುಣಾರ್ಭಟ : ನೆಲಕಚ್ಚಿದ ಬಾಳೆ ಬೆಳೆ - ಹಿರೇಕೆರೂರು ತಾಲೂಕಿನ ನಿಡನೇಗಿಲು ಗ್ರಾಮದಲ್ಲಿ ಗಾಳಿ ಮಳೆ

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬಾಳೆ ಇದೀಗ ಮಣ್ಣು ಪಾಲಾಗಿದೆ. ಸಂಕಷ್ಟಕ್ಕೀಡಾಗಿರುವ ರೈತ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ..

Haveri District
ಹಾವೇರಿಯಲ್ಲಿ ವರುಣಾರ್ಭಟ: ನೆಲಕಚ್ಚಿದ ಮೂರು ಎಕರೆ ಬಾಳೆ

By

Published : Aug 7, 2020, 7:17 PM IST

ಹಾವೇರಿ:ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ನದಿಗಳು ಮೈದುಂಬಿ ಹರಿಯುತ್ತಿವೆ. ಜೊತೆಗೆ ಮಳೆ ಅವಾಂತರದಿಂದಾಗಿ ಹಲವೆಡೆ ಬೆಳೆಗಳು ಧರಾಶಾಹಿಯಾಗಿವೆ.

ನೆಲಕಚ್ಚಿರುವ ಮೂರು ಎಕರೆ ಬಾಳೆ

ಜಿಲ್ಲೆಯ ಹಿರೇಕೆರೂರು ತಾಲೂಕಿನ ನಿಡನೇಗಿಲು ಗ್ರಾಮದಲ್ಲಿ ಅಶೋಕ ಬಿಲ್ಲಳ್ಳಿ ಎಂಬ ರೈತ ಬೆಳೆದಿದ್ದ ಮೂರು ಎಕರೆ ಬಾಳೆ ನೆಲಕಚ್ಚಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬಾಳೆ ಇದೀಗ ಮಣ್ಣು ಪಾಲಾಗಿದೆ. ಸಂಕಷ್ಟಕ್ಕೀಡಾಗಿರುವ ರೈತ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details