ಹಾವೇರಿ:ಬೆಳಗ್ಗೆ 8 ಗಂಟೆ 30 ನಿಮಿಷದವರೆಗೆ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಡದಂತೆ ಸೂಚಿಸದ ಕಾರಣ ನೂರಾರು ವಿದ್ಯಾರ್ಥಿಗಳು ಸಾಮಾಜಿಕ ಅಂತರದ ಬಾಕ್ಸ್‌ಗಳಲ್ಲೇ ಗಂಟೆಗಟ್ಟಲೆ ಕಾದು ನಿಂತ ಘಟನೆ ಹಾವೇರಿಯಲ್ಲಿ ನಡೆಯಿತು.
ಸಮಯ ಮೀರಿದ್ರೂ ಬಾರದ ಸ್ಕ್ರೀನಿಂಗ್ ಸಿಬ್ಬಂದಿ: ವಿದ್ಯಾರ್ಥಿಗಳು ಸುಸ್ತು - haveri SSLC students
ಸಮಯಕ್ಕೆ ಸರಿಯಾಗಿ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ಸಿಬ್ಬಂದಿ ಬರದೇ ವಿದ್ಯಾರ್ಥಿಗಳು ಗಂಟೆಗಟ್ಟಲೆ ನಿಂತು ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.
ಸಮಯ ಮೀರಿದರೂ ಬಾರದ ಸ್ಕ್ರೀನಿಂಗ್ ಸಿಬ್ಬಂದಿ: ಗಂಟೆಗಟ್ಟಲೆ ನಿಂತು ಕಾದ ವಿದ್ಯಾರ್ಥಿಗಳು
ಇಲ್ಲಿನ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 8:30ರವರೆಗೂ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ಸಿಬ್ಬಂದಿ ಬರದೆ ವಿದ್ಯಾರ್ಥಿಗಳು ಗಂಟೆಗಟ್ಟಲೆ ನಿಂತು ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.
ಇದಾದ ಬಳಿಕ ಆಗಮಿಸಿದ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಕಳುಹಿಸಿದರು.