ಹಾವೇರಿ:ಜಿಲ್ಲೆಯ ನೆರೆಪೀಡಿತ ಗ್ರಾಮಗಳಿಗೆ ಹಲವು ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ಈ ಮಧ್ಯೆ ಶಿವಮೊಗ್ಗ ಸವಿತಾ ಸಮಾಜ ಮಂಗಳವಾರ ಹಾವೇರಿ ಜಿಲ್ಲೆಯ ನೆರೆಪೀಡಿತ ಗ್ರಾಮದ ಪುರುಷರಿಗೆ ಉಚಿತ ಕಟಿಂಗ್ ಮತ್ತು ಶೇವಿಂಗ್ ಮಾಡಿದ್ದಾರೆ.
ನೆರೆ ಸಂತ್ರಸ್ತರಿಗೆ ಮಿಡಿದ ಸವಿತಾ ಸಮಾಜ... ಪ್ರವಾಹ ಪೀಡಿತರಿಗೆ ಉಚಿತವಾಗಿ ಕಟಿಂಗ್ ಶೇವಿಂಗ್ - free hair cutting and shaving for flood victims
ಶಿವಮೊಗ್ಗದ ಸವಿತಾ ಸಮಾಜ ಮಂಗಳವಾರ ಹಾವೇರಿ ಜಿಲ್ಲೆಯ ನೆರೆಪೀಡಿತ ಗ್ರಾಮದ ಪುರುಷರಿಗೆ ಉಚಿತ ಕಟಿಂಗ್ ಮತ್ತು ಶೇವಿಂಗ್ ಮಾಡಿದ್ದಾರೆ.

ಕಟಿಂಗ್ ಶೇವಿಂಗ್
ನೆರೆ ಸಂತ್ರಸ್ಥರಿಗೆ ಉಚಿತವಾಗಿ ಕಟಿಂಗ್ ಶೇವಿಂಗ್ ಮಾಡಿದ ಶಿವಮೊಗ್ಗ ಸವಿತಾ ಸಮಾಜದ ಸದಸ್ಯರು
ನೆರೆ ಸಂತ್ರಸ್ತ ಗ್ರಾಮಗಳಾದ ನಾಗನೂರು, ಹಲಸೂರು, ಕೂಡಲ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿದ ಸಮಾಜದ ಸದಸ್ಯರು ನೆರೆ ಸಂತ್ರಸ್ತರಿಗೆ ಉಚಿತ ಕಟಿಂಗ್ ಮತ್ತು ಶೇವಿಂಗ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ನಾಗರಾಜ, ಮಧು, ಪ್ರಶಾಂತ್ ಮತ್ತು ಗಿರೀಶ್ ಸೇರಿದಂತೆ ವಿವಿಧ ಸದಸ್ಯರು ಪಾಲ್ಗೊಂಡಿದ್ದರು. ಸವಿತಾ ಸಮಾಜದ ಕಾರ್ಯಕ್ಕೆ ನೆರೆ ಸಂತ್ರಸ್ತ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
Last Updated : Aug 21, 2019, 7:24 AM IST