ಹಾವೇರಿ : ರಾಜ್ಯ ಸಚಿವ ಸಂಪುಟ ರಚನೆ ಬುಧವಾರ ಅಥವಾ ಗುರುವಾರ ಆಗಬಹುದು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಮಾಜಿ ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ರಚನೆ ಕುರಿತಂತೆ ನಮಗೆ ಯಾವುದೇ ಕರೆ ಬಂದಿಲ್ಲ. ಬುಧವಾರ ಅಥವಾ ಗುರುವಾರ ಸಂಪುಟ ರಚನೆ ಆಗಬಹುದು ಎಂದರು.
ಓದಿ: ಯಡಿಯೂರಪ್ಪನವರನ್ನು ಯಾವತ್ತೂ ಮಾಜಿ ಸಿಎಂ ಅಂತ ಕರೆಯಲ್ಲ: ರೇಣುಕಾಚಾರ್ಯ
ಪ್ರವಾಹ ಹಾನಿ ಕುರಿತಂತೆ ಮಾತನಾಡಿದ ಅವರು, ಮನೆ, ಬೆಳೆ ಹಾನಿ ಕುರಿತಂತೆ ಪರಿಹಾರ ಒದಗಿಸುವ ಸಲುವಾಗಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ನಮ್ಮ ಕ್ಷೇತ್ರದಲ್ಲಿ ನಾಲ್ಕು ಸೇತುವೆಗಳಿಗೆ ಹಾನಿಯಾಗಿದ್ದು, ಹೊಸ ಸೇತುವೆಗಳನ್ನು ನಿರ್ಮಿಸುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದರು.