ಕರ್ನಾಟಕ

karnataka

ETV Bharat / state

ಹಾವೇರಿ ಜಿಲ್ಲೆಯಲ್ಲಿಂದು 36 ಜನರಿಗೆ ಕೊರೊನಾ, ಮೂವರು ಸಾವು - ಹಾವೇರಿ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ

ಹಾವೇರಿ ತಾಲೂಕಿನಲ್ಲಿ 10, ರಾಣೆಬೆನ್ನೂರು ತಾಲೂಕಿನಲ್ಲಿ 07, ಹಾನಗಲ್, ಶಿಗ್ಗಾವಿ ಹಾಗೂ ಹಿರೇಕೆರೂರು ತಾಲೂಕುಗಳಲ್ಲಿ ತಲಾ ಐದು ಪ್ರಕರಣಗಳು ವರದಿಯಾಗಿವೆ. ಸವಣೂರು ತಾಲೂಕಿನಲ್ಲಿ ನಾಲ್ಕು ಪ್ರಕರಣಗಳು ದೃಢಪಟ್ಟಿವೆ.

Corona, three people killed in Haveri district
ಹಾವೇರಿ ಜಿಲ್ಲೆಯಲ್ಲಿಂದು 36 ಜನರಿಗೆ ಕೊರೊನಾ, ಮೂವರು ಸೋಂಕಿತರು ಸಾವು

By

Published : Aug 11, 2020, 8:04 PM IST

ಹಾವೇರಿ:ಜಿಲ್ಲೆಯಲ್ಲಿಂದು 36 ಜನರಿಗೆ ಕೊರೊನಾ ವಕ್ಕರಿಸಿದೆ. ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1925 ಕ್ಕೇರಿದೆ ಎಂದು ತಿಳಿಸಿದೆ.

ಮಂಗಳವಾರ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ 139 ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹಾವೇರಿ ತಾಲೂಕಿನಲ್ಲಿ 10, ರಾಣೆಬೆನ್ನೂರು ತಾಲೂಕಿನಲ್ಲಿ 07, ಹಾನಗಲ್, ಶಿಗ್ಗಾವಿ ಹಾಗೂ ಹಿರೇಕೆರೂರು ತಾಲೂಕಲ್ಲಿ ತಲಾ ಐದು ಪ್ರಕರಣಗಳು ವರದಿಯಾಗಿವೆ. ಸವಣೂರು ತಾಲೂಕಿನಲ್ಲಿ ನಾಲ್ಕು ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯಲ್ಲಿ ಮಂಗಳವಾರ ಕೊರೊನಾದಿಂದ ಮೂರು ಜನ ಮೃತಪಟ್ಟಿದ್ದನ್ನ ಜಿಲ್ಲಾಡಳಿತ ದೃಢಪಡಿಸಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 42 ಕ್ಕೇರಿದಂತಾಗಿದೆ. ಈವರೆಗೆ ಜಿಲ್ಲೆಯಲ್ಲಿ 1,237 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 163 ಜನರನ್ನ ಹೋಂ ಐಸೋಲೇಷನ್‌ನಲ್ಲಿರಿಸಲಾಗಿದೆ. 483 ಸೋಂಕಿತರಿಗೆ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details