ಕರ್ನಾಟಕ

karnataka

ETV Bharat / state

ಕೃಷಿ ಸಚಿವರಿಗೆ ಖುಷಿ ತಂದ ಕೊರೊನಾ ನೆಗೆಟಿವ್ ವರದಿ.. ರಿಲಾಕ್ಸ್​ ಮೂಡ್​ನಲ್ಲಿ ಬಿ ಸಿ ಪಾಟೀಲ್ - ಹಾವೇರಿ ಸುದ್ದಿ

ಕೊರೊನಾ ವರದಿ ನೆಗೆಟಿವ್‌ ಎಂದು ಬಂದಿರುವ ಹಿನ್ನೆಲೆ ತಾವು ಮತ್ತೆ ಸಾರ್ವಜನಿಕರ ಸೇವೆಗೆ ಸನ್ನದ್ಧವಾಗಿರೋದಾಗಿ ತಿಳಿಸಿದ್ದಾರೆ. ಈ ಕುರಿತಂತೆ ವಾಟ್ಸ್​ಆ್ಯಪ್ ಮತ್ತು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ..

BC Patil
ಬಿ.ಸಿ ಪಾಟೀಲ್

By

Published : Jul 19, 2020, 2:34 PM IST

ಹಾವೇರಿ :ಕೊರೊನಾ ಪಾಸಿಟಿವ್ ಆಗಿದ್ದ ತಮ್ಮ ಸಂಬಂಧಿಕರ ಸಂಪರ್ಕದಿಂದ ಕ್ವಾರಂಟೈನ್ ಆಗಿದ್ದ ಕೃಷಿ ಸಚಿವ ಬಿ ಸಿ ಪಾಟೀಲ್ ಈಗ ನಿಟ್ಟುಸಿರುಬಿಟ್ಟಿದ್ದಾರೆ. ಸ್ವತಃ ಪರೀಕ್ಷೆಗೊಳಗಾಗಿದ್ದ ಅವರ ವರದಿ ಈಗ ನೆಗೆಟಿವ್ ಎಂದು ಬಂದಿದೆ.

ರಿಲಾಕ್ಸ್​ ಮೂಡ್​ನಲ್ಲಿ ಬಿ ಸಿ ಪಾಟೀಲ್

ಈ ಹಿನ್ನೆಲೆ ಸಚಿವ ಪಾಟೀಲ್, ರವಿವಾರ ಕ್ವಾರಂಟೈನ್​ನಿಂದ ಹೊರ ಬಂದಿದ್ದಾರೆ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ತಮ್ಮ ಸಂಬಂಧಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಮನೆಯ ಸದಸ್ಯರು, ನನ್ನ ಜೊತೆ ಸಹಾಯಕರು ಹೋಂ ಕ್ವಾರಂಟೈನ್ ಆಗಿದ್ದೆವು. ಈಗ ತಮ್ಮ ವರದಿ ನೆಗಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆ ತಾವು ಮತ್ತೆ ಸಾರ್ವಜನಿಕರ ಸೇವೆಗೆ ಸನ್ನದ್ಧವಾಗಿರೋದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಕೃಷಿ ಸಚಿವ ಬಿ ಸಿ ಪಾಟೀಲ್ ವಾಟ್ಸ್​ಆ್ಯಪ್ ಮತ್ತು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ABOUT THE AUTHOR

...view details