ರಾಣೆಬೆನ್ನೂರು: ಮಹಿಳೆಯೊಬ್ಬರು ಆಟೋದಲ್ಲಿ ಬ್ಯಾಗ್ ಮರೆತು ಬಿಟ್ಟು ಹೋಗಿದ್ದು, ಅದನ್ನು ಮತ್ತೆ ಅವರಿಗೆ ಮರಳಿಸುವ ಮೂಲಕ ಆಟೋ ಚಾಲಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಹೂವಿನಹಡಗಲಿ ತಾಲೂಕಿನ ಸುನೀತಾ ಸುರೇಶ್ ಮಾಲ್ದಾರ ಎಂಬ ಮಹಿಳೆ ರಾಣೆಬೆನ್ನೂರು ನಗರಕ್ಕೆ ಆಗಮಿಸಿದ್ದಾರೆ. ಈ ಸಮಯದಲ್ಲಿ ಆಟೋದಲ್ಲಿ ಆಕಸ್ಮಿಕವಾಗಿ ಬ್ಯಾಗ್ ಮರೆತು ಬಿಟ್ಟು ಹೋಗಿದ್ದಾರೆ. ಅದನ್ನು ಗಮನಿಸಿದ ಆಟೋ ಚಾಲಕ ಬಿದ್ದಾಡೆಪ್ಪ ಮೇಡ್ಲೆರಿ ಅವರು ಬ್ಯಾಗನ್ನು ನಗರದ ಶಹರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ನಂತರ ಪೊಲೀಸರು ಬ್ಯಾಗ್ ಪರಿಶೀಲಿಸಿದಾಗ ಮಹಿಳೆಯ ಮಾಹಿತಿ ಸಿಕ್ಕಿದೆ. ತಕ್ಷಣವೇ ಅವರ ಕುಟುಂಬಕ್ಕೆ ಕರೆ ಮಾಡಿ ಬ್ಯಾಗ್ನಲ್ಲಿದ್ದ 15 ಗ್ರಾಂ ಬಂಗಾರ ಹಾಗೂ ಹಣವಿದ್ದ ಬ್ಯಾಗನ್ನು ಪೊಲೀಸರ ಸಮ್ಮುಖದಲ್ಲಿ ಮರಳಿಸಿದ್ದಾರೆ.
ಆಟೋ ಚಾಲಕ ಬಿದ್ದಾಡೆಪ್ಪ ಮೇಡ್ಲೆರಿ ಅವರ ಮಾನವೀಯತೆಗೆ ರಾಣೆಬೆನ್ನೂರು ಪೊಲೀಸರು ಸೇರಿದಂತೆ ಮಹಿಳೆ ಪ್ರಶಂಸೆ ವ್ಯಕ್ತಪಡಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಸಮಯದಲ್ಲಿ ಶಹರ ಠಾಣೆ ಸಿಬ್ಬಂದಿ ಕೃಷ್ಣಾರೆಡ್ಡಿ, ಬೀರಪ್ಪ ಪೂಜಾರ, ಸವೂರು, ಗಣೇಶ ಹಾಜರಿದ್ದರು.
ಓದಿ:ಬೆಂಗಳೂರು: ಪೊಲೀಸರ ಕಾರ್ಯಾಚರಣೆಯಿಂದ 57 ಭಿಕ್ಷುಕರಿಗೆ ಸಿಕ್ತು ಸೂರು