ಹಾವೇರಿ: ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಮೂರು ವರ್ಷ ಹತ್ತು ತಿಂಗಳು ಸಿಎಂ ಆಗಿ ಇರಲಿದ್ದಾರೆ. ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್ ಜೆಡಿಎಸ್‌ನವರು ಪರಸ್ಪರ ಜಗಳವಾಡಿಕೊಂಡರು. ಈಗ ಅಧಿಕಾರವಿಲ್ಲದೆ ಪರಿತಪಿಸ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ರು.
ಅಧಿಕಾರವಿಲ್ಲದೆ ಮೈತ್ರಿ ಪರಿತಪಿಸುತ್ತಿದೆ.. ಕಂದಾಯ ಸಚಿವ ಆರ್.ಅಶೋಕ್..
ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್-ಜೆಡಿಎಸ್‌ನವರು ಪರಸ್ಪರ ಜಗಳವಾಡಿಕೊಂಡರು. ಈಗ ಅಧಿಕಾರವಿಲ್ಲದೆ ಪರಿತಪಿಸ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ರು.
ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದ್ಯ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಇನ್ನೂ ಮಹಾನಗರ ಪಾಲಿಕೆ ಸೇರಿದಂತೆ ಮುಂದೆ ಎಲ್ಲೆಡೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.ಸಿದ್ದರಾಮಯ್ಯ ಅವರಿಗಿಂತ ನಮಗೆ ಕನ್ನಡಾಭಿಮಾನ ಜಾಸ್ತಿ. ಇವರಿಗಿಂತ ಮುಂಚೆ ನಮಗೆ ಕನ್ನಡದ ಬಗ್ಗೆ ಗೊತ್ತಿದೆ. ಇವರಿಂದ ನಾವು ಕಲಿಯಬೇಕಾಗಿಲ್ಲ. ಅಸೆಂಬ್ಲಿಯಲ್ಲಿ ಕಾಗುಣಿತ ಹೇಳಿದಾಕ್ಷಣ ಅವರು ಮೇಷ್ಟ್ರಾಗೋದಿಲ್ಲ. ಹಾಗಂತ ಅವರೇನಾದರೂ ತಿಳಿದುಕೊಂಡಿದ್ದರೆ ಅದು ತಪ್ಪು ಅಂತಾ ವ್ಯಂಗ್ಯವಾಡಿದ್ರು.
ಮಾಜಿ ಸಚಿವ ಡಿಕೆಶಿ ಇಡಿ ಪ್ರಕರಣಕ್ಕೂ, ನಮ್ಗೂ ಸಂಬಂಧವಿಲ್ಲ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಈ ರೀತಿಯ ಬೇಕಾದಷ್ಟು ತನಿಖೆಗಳು ಆಗಿವೆ. ಬೇಕಾದಷ್ಟು ಜನರು ಜೈಲಿಗೆ ಹೋಗಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್‌ನವರೆ ಕಾರಣ ಅನ್ನೋಕಾಗುತ್ತಾ?. ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತಾರೆ ಇಲ್ಲವೇ ಬಿಡ್ತಾರೆ. ಆದರೆ, ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸಚಿವ ಅಶೋಕ ಹೇಳಿದ್ರು.