ಹಾಸನ: ಕೊಟ್ಟ ಸಾಲದ ಹಣ ವಾಪಸ್ ಕೇಳಲು ಬಂದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಅಮಾನವೀಯ ಘಟನೆ ನಗರದ ಬೀರನಹಳ್ಳಿ ಕೆರೆ ಬಡಾವಣೆಯಲ್ಲಿ ನಿನ್ನೆ ಸಂಜೆ ನಡೆದಿದೆ.
ಹಣಕ್ಕಾಗಿ ಬಿತ್ತು ಹೆಣ... ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಕೊಲೆ! - ಬೀರನಹಳ್ಳಿ ಕೆರೆ ಬಡಾವಣೆ
ಕೊಟ್ಟ ಸಾಲದ ಹಣ ವಾಪಸ್ ಕೇಳಲು ಬಂದ ಮಹಿಳೆಯನ್ನು ಕೊಲೆಗೈದಿರುವ ಘಟನೆ ಹಾಸನದ ಬೀರನಹಳ್ಳಿ ಕೆರೆ ಬಡಾವಣೆಯಲ್ಲಿ ನಡೆದಿದೆ.
ಶಶಿಕಲಾ(28) ಕೊಲೆಯಾದ ಮಹಿಳೆ. ತೇಜು ಎಂಬಾಕೆ ತನಗೆ ಎರಡು ಲಕ್ಷ ಹಣ ಸಾಲ ಕೊಟ್ಟಿದ್ದ ಶಶಿಕಲಾಗೆ ಸಾಲದ ಹಣ ವಾಪಸ್ ನೀಡೋದಾಗಿ ಹೇಳಿ, ಮನೆಗೆ ಕರೆಸಿ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಶಶಿಕಲಾರನ್ನು ಕೊಂದು ಚೀಲಕ್ಕೆ ತುಂಬಿ ತೇಜು ಮತ್ತು ಆಕೆಯ ಪತಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ನಂತರ ರೊಚ್ಚಿಗೆದ್ದ ಸ್ಥಳೀಯರು ತೇಜು ಪತಿಗೆ ಸೇರಿದ ಆಟೋ ಧ್ವಂಸ ಮಾಡಿದ್ದಾರೆ. ತೇಜು ಹಾಗೂ ಆಕೆಯ ಪತಿ ರಮೇಶ್ ವಿರುದ್ಧ ಹತ್ಯೆ ಪ್ರಕರಣ ದಾಖಲಾಗಿದೆ.
ಇನ್ನು ಶಶಿಕಲಾ ಪತಿ ಸೇನೆಯಲ್ಲಿದ್ದರಿಂದ ಆಕೆ ತನ್ನ ಮಕ್ಕಳೊಂದಿಗೆ ಹಾಸನದಲ್ಲಿ ವಾಸವಿದ್ದರು. ಈ ಸಂಬಂಧ ಹಾಸನ ಬಡಾವಣೆ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಪ್ರಕಾಶ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.