ಕರ್ನಾಟಕ

karnataka

ETV Bharat / state

ರೆಸಾರ್ಟ್‌ನಲ್ಲಿ ಯುವಕ ಅನುಮಾನಾಸ್ಪದ ಸಾವು.. ಕೊಲೆ ಶಂಕೆ - ಹೆತ್ತೂರು

ಹೆತ್ತೂರು ಸಮೀಪದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಯುವಕ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಗ್ರಾಮಸ್ಥರು ಯುವಕನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ.

death
ಕಾರ್ತೀಕ್ ಸಾವು

By

Published : Nov 6, 2020, 7:53 PM IST

ಸಕಲೇಶಪುರ:ತಾಲೂಕಿನ ಹೆತ್ತೂರು ಹೋಬಳಿಯ ರೆಸಾರ್ಟ್‌ವೊಂದರಲ್ಲಿ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಯುವಕನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹೆತ್ತೂರು ಹೋಬಳಿ ವನಗೂರು ಗ್ರಾ.ಪಂ ವ್ಯಾಪ್ತಿಯ ಪಟ್ಲ ಗ್ರಾಮದ ಕಾರ್ತೀಕ್ (22) ಎಂಬಾತ ಹೆತ್ತೂರು ಸಮೀಪದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಕಳೆದ ರಾತ್ರಿ ತಂಗಿದ್ದು ಬೆಳಗ್ಗಿನ ವೇಳೆ ಸಾವನ್ನಪ್ಪಿರುತ್ತಾನೆ. ಕಾರ್ತೀಕ್ ಈ ಹಿಂದೆ ಇದೇ ರೆಸಾರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ರೆಸಾರ್ಟ್‌ನವರು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳುತ್ತಿದ್ದಾರೆ. ಆದರೆ ಇದು ಸಂಪೂರ್ಣ ಅನುಮಾನಾಸ್ಪದವಾಗಿದೆ.

ವಿರೂಪಾಕ್ಷ, ಸ್ಥಳೀಯರು

ಘಟನೆ ಕುರಿತು ಮುಂಜಾನೆಯೆ ಪೋಲಿಸರಿಗೆ ಮಾಹಿತಿ ಇದ್ದರೂ ಸಹ ಮಧ್ಯಾಹ್ನದ ವೇಳೆ ಯಾವುದೇ ರೀತಿಯಲ್ಲಿ ಸರಿಯಾಗಿ ಮಹಜರ್ ಮಾಡದೆ ಮೃತ ದೇಹವನ್ನು ಶವ ಪರೀಕ್ಷೆಗೆ ತೆಗೆದುಕೊಂಡು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೆ ಇದರ ವಿರುದ್ದ ತನಿಖೆ ಮಾಡಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಗ್ರಾಮಸ್ಥ ವಿರೂಪಾಕ್ಷ ಹೇಳಿದ್ದಾರೆ. ಈ ಬಗ್ಗೆ ಯಸಳೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details