ಕರ್ನಾಟಕ

karnataka

ETV Bharat / state

ನೆರೆ ಹಾನಿ ಬಗ್ಗೆ ಅಧಿಕಾರಿಗಳಿಂದ ತಪ್ಪು ಮಾಹಿತಿ; ಸಿ.ಟಿ ರವಿ,ಮಾದುಸ್ವಾಮಿ ಗರಂ - ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ

ಪ್ರವಾಹ ಹಾನಿ ಸಂಬಂಧ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದ್ದಕ್ಕೆ ಸಚಿವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸಿ.ಟಿ ರವಿ,ಮಾದುಸ್ವಾಮಿ ಗರಂ!

By

Published : Aug 23, 2019, 4:50 PM IST

ಹಾಸನ :ನೆರೆ ಹಾನಿ ಬಗ್ಗೆ ಮಾಹಿತಿ ಕೊಡಿ ಎಂದರೆ ಮನಸೋ ಇಚ್ಚೆ ತಪ್ಪು ಮಾಹಿತಿ ನೀಡುತ್ತಿದ್ದೀರಲ್ಲ, ನಾವೇನು ತಮಾಷೆ ನೋಡಲು ಬಂದಿದ್ದೇವೆ ಎಂದುಕೊಂಡಿದ್ದೀರಾ? ಎಂದು ಅಧಿಕಾರಿಗಳ ವಿರುದ್ಧ ಸಚಿವರಾದ ಸಿ.ಟಿ.ರವಿ ಮತ್ತು ಮಾದುಸ್ವಾಮಿ ಗರಂ ಆದ ಪ್ರಸಂಗ ನಡೆಯಿತು.

ಅತಿವೃಷ್ಟಿ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಸಚಿವರು, ಜಿಲ್ಲಾಧಿಕಾರಿಯವರಿಗೆ ನೆರೆ ಹಾನಿ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದರೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿಧಿಯಿಂದ ಯಾವ ಮಾನದಂಡದ ಮೇಲೆ ನೆರವು ನೀಡುತ್ತದೆ? ಉಸ್ತುವಾರಿ ಕಾರ್ಯದರ್ಶಿಗಳೇ, ನೀವೇ ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟ ಮಾಹಿತಿ ನೀಡಿ ಎಂದು ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ಅಕ್ರಂಪಾಷ ನೀಡುತ್ತಿರುವ ಮಾಹಿತಿ ಪಡೆದು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ಆಗಲ್ಲ. ಚಿಕ್ಕಮಗಳೂರು ಡಿಸಿ ಎಷ್ಟು ನಿಖರವಾಗಿ ಮಾಹಿತಿ ನೀಡಿದ್ದರು. ನಷ್ಟದ ಮಾಹಿತಿ ಸತ್ಯಾಂಶಕ್ಕೆ ಹತ್ತಿರವಾಗಿರಬೇಕಲ್ಲವೇ? ಬೆಳೆ ನಷ್ಟ ಎಷ್ಟು, ಮನೆ ಎಷ್ಟು, ಸರ್ಕಾರಿ ಆಸ್ತಿ ಎಷ್ಟು, ಸರ್ಕಾರಿ ಶಾಲೆಗಳು ಎಷ್ಟು ಹಾನಿಯಾಗಿದೆ? ಇದೆಲ್ಲಾ ಪ್ರವಾಹದಿಂದಲೇ ಸಂಭವಿಸಿದ್ದೇ? ಕಚ್ಚಾಮನೆ ಎಷ್ಟು, ಪಕ್ಕಾ ಮನೆ ಎಷ್ಟು? ಹೀಗೆ ಪ್ರತ್ಯೇಕವಾಗಿ ಮಾಹಿತಿ ನೀಡಬಾರದೆ ಎಂದು ಸಚಿವ ಮಾಧುಸ್ವಾಮಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಿ.ಟಿ ರವಿ, ಮಾದುಸ್ವಾಮಿ ಗರಂ

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಬಹಳಷ್ಟು ವರ್ಷದಿಂದ ಸರ್ಕಾರಿ ಶಾಲೆ ಕಟ್ಟಡ ದುರಸ್ತಿ ಆಗಿರಲಿಲ್ಲ. ಕಟ್ಟಡಗಳು ಮಳೆಗೆ ಬಿದ್ದು ಹೋಗಿದೆ ಎಂದರು.

ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ, ಸಕಲೇಶಪುರ ತಾಲೂಕು ಐಗೂರು ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ನೀವು ನೋಡಿದ್ರೆ ವಿದ್ಯುತ್ ಕೊಟ್ಟಿದ್ದೇವೆ ಎನ್ನುತ್ತಿದ್ದೀರಲ್ಲ. ಸಿಬ್ಬಂದಿಗಳೇ ಇಲ್ಲ, ಎಲ್ಲಿಂದ ಸಮಸ್ಯೆ ಬಗೆಹರಿಸುತ್ತೀರಿ ಎಂದು ಸಚಿವರ ಪ್ರಶ್ನೆಗೆ ಧ್ವನಿಗೂಡಿಸುತ್ತಲೇ ಸೆಸ್ಕ್ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ತೋಡಿಕೊಂಡರು.

ABOUT THE AUTHOR

...view details