ಹಾಸನ: ರಾಜ್ಯದಲ್ಲಿ ಆಗಿರೋ ನೆರೆಹಾನಿ ಎನ್ಡಿಆರ್ಎಫ್ ನಿಯಮಾವಳಿಗಳ ಅಡಿ ಬರೋದಿಲ್ಲ. ನಾನು ಸ್ಪಷ್ಟವಾಗಿ ಹೇಳ್ತೇನೆ. ರಾಜ್ಯದಲ್ಲಿ 32 ಸಾವಿರ ಕೋಟಿ ನಷ್ಟವಾಗಿದೆ ಎಂದು ಮನವಿ ಸಲ್ಲಿಸಿರೋದು ನಿಜ. ಆದ್ರೆ, ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ನಮಗೆ ಅರ್ಹತೆ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಆಗಿರೋ ನಷ್ಟ ಎನ್ಡಿಆರ್ಎಫ್ ನಿಯಮಾವಳಿಗಳ ಅಡಿ ಬರೋದಿಲ್ಲ: ಮಾಧುಸ್ವಾಮಿ - J.C. Madhuswamy
ರಾಜ್ಯದಲ್ಲಿ ಆಗಿರೋ ನೆರೆಹಾನಿ ಎನ್ಡಿಆರ್ಎಫ್ ನಿಯಮಾವಳಿಗಳ ಅಡಿ ಬರೋದಿಲ್ಲ. ನಾನು ಸ್ಪಷ್ಟವಾಗಿ ಹೇಳ್ತೇನೆ. ರಾಜ್ಯದಲ್ಲಿ 32 ಸಾವಿರ ಕೋಟಿ ನಷ್ಟವಾಗಿದೆ ಎಂದು ಮನವಿ ಸಲ್ಲಿಸಿರೋದು ನಿಜ. ಆದ್ರೆ, ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ನಮಗೆ ಅರ್ಹತೆ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಆಗಿರುವ ನೆರೆಹಾನಿಗೆ ಸೂಕ್ತ ಪರಿಹಾರವನ್ನ ಕೇಂದ್ರ ಸರ್ಕಾರ ನೀಡಿಲ್ಲ ಎಂಬ ಪ್ರಶ್ನೆಗೆ ಮಾತನಾಡಿದ ಅವರು, ಆಗಿರೋ ನಷ್ಟದಲ್ಲಿ ನಮಗೆ ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ಕಾಲು ಭಾಗ ಅರ್ಹತೆಯೂ ಇಲ್ಲ. ನಮ್ಮ ನೀರಾವರಿ ಇಲಾಖೆಯ ಅಡಿಯಲ್ಲಿ 454 ಕೋಟಿ ನಷ್ಟವಾಗಿದೆ. ಎನ್ಡಿಆರ್ಎಫ್ ನಿಯಮದ ಪ್ರಕಾರ ಬೆಲೆ ಕಟ್ಟಿದ್ರೆ ನಮ್ಮ ಇಲಾಖೆಗೆ ಪರಿಹಾರ ಸಿಗೋದು 11 ಕೋಟಿಯಷ್ಟು ಮಾತ್ರ. ಹಾಗಾಗಿ ನಾವು ನಿಯಮಾವಳಿ ಬಿಟ್ಟು ಪ್ಯಾಕೇಜ್ ಮಾಡಿ ಪರಿಹಾರ ನೀಡಿ ಎಂದು ಒತ್ತಡ ಹಾಕಿದ್ದೇವೆ ಎಂದ್ರು.
ರಾಜ್ಯದ ನೆರೆ ಹಾವಳಿ ವೀಕ್ಷಿಸಲು ಪ್ರಧಾನಿ ಬಾರದ ಟೀಕೆಗೆ ಉತ್ತರಿಸಿದ ಮಾಧುಸ್ವಾಮಿ, ಪ್ರಧಾನಿಗೆ ಇರುವಷ್ಟು ಅಧಿಕಾರವನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊಟ್ಟಿದ್ದಾರೆ. ಹಾಗಾಗಿ ಅವರು ಬಂದು ನೋಡಿದ್ದಾರೆ. ನಿರ್ಮಾಲಾ ಸೀತಾರಾಮನ್ ಕೂಡ ನೋಡಿದ್ದಾರೆ. ಪ್ರಧಾನಿಯೇ ಬಂದು ನೋಡಬೇಕು ಎನ್ನೋದು ಸರಿಯಲ್ಲ ಎಂದು ಪ್ರಧಾನಿ ಬಗ್ಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಮೈತ್ರಿ ಸರ್ಕಾರದ ಹಲವರಿಗೆ ತಿರುಗೇಟು ನೀಡಿದ್ರು.