ಹಾಸನ:ದೇವೇಗೌಡರು ರಾಜಕೀಯದಲ್ಲಿ ಬಿಳಿ ಆನೆ ಇದ್ದಂಗೆ. 60 ವರ್ಷದ ರಾಜಕೀಯದಲ್ಲಿ ಎಂದು ಕೂಡ ಅವರು ಕೆಟ್ಟ ಹೆಸರು ಪಡೆದುಕೊಂಡಿಲ್ಲ. ಅವರು ನಡೆದಿದ್ದೇ ದಾರಿ, ಅವರ ಮಾರ್ಗದರ್ಶನದಲ್ಲಿ ನಾನು ನಡೆಯುವೆ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದರು.
ದೇವೇಗೌಡ್ರು ರಾಜಕೀಯದಲ್ಲಿ ಬಿಳಿ ಆನೆ ಇದ್ದಂತೆ : ಪ್ರಜ್ವಲ್ ರೇವಣ್ಣ - ಕಾರ್ಯಕರ್ತ
ರಾಜಕೀಯದಲ್ಲಿ ದೇವೇಗೌಡ್ರು ಬಿಳಿ ಆನೆ ಇದ್ದಂತೆ. ಅವರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ನನಗೆ ಕಾರ್ಯಕರ್ತರೇ ದೇವರು ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ಜಿಲ್ಲೆಯ ಅರಸೀಕೆರೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ದೇವೇಗೌಡ್ರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ನನಗೆ ಕಾರ್ಯಕರ್ತರೇ ದೇವರು. ಪ್ರತಿನಿತ್ಯ ಊಟ ಮಾಡುವ ಸಂದರ್ಭದಲ್ಲಿ ನನ್ನ ತಾಯಿ ನಿಮ್ಮ ಬಗ್ಗೆ ಹೇಳುತ್ತಿದ್ದ ಮಾತುಗಳು ಈಗಲೂ ಮನಸ್ಸಲ್ಲಿ ಅಚ್ಚಳಿಯದಂತೆ ಉಳಿದಿವೆ ಎಂದರು.
ಚುನಾವಣೆಯಲ್ಲಿ ಗೆದ್ದು ಬಂದ ನಂತರವೂ ನಾನು ಸಾಮಾನ್ಯ ಕಾರ್ಯಕರ್ತನಂತೆ ಕ್ಷೇತ್ರಕ್ಕಾಗಿ ದುಡಿಯುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ. ನಾನು ಅರಸೀಕೆರೆ ಶಾಸಕರಾಗಿರೋ ಶಿವಲಿಂಗೇಗೌಡರಿಗಿಂತ ಚಿಕ್ಕವನು. ಚುನಾವಣೆಯ ಸಂದರ್ಭ ಹಾಗೂ ಗೆದ್ದ ನಂತರವೂ ನಾನು ವಾರದಲ್ಲಿ ಮೂರು ಬಾರಿ ಅವರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತೇನೆ. ರೇವಣ್ಣ ಸಾಹೇಬ್ರ ಕೆಲಸದ ರೀತಿಯಲ್ಲಿಯೇ ನಾನು ಕೂಡಾ ಮುಂದಿನ ದಿನದಲ್ಲಿ ಜಿಲ್ಲೆಯ ಅಭಿವೃದ್ದಿಗೆ ದುಡಿಯುತ್ತೇನೆ ಎಂದರು.