ಹಾಸನ: ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಸಮೀಪದ ಹೊನ್ನೇನಹಳ್ಳಿ ಗ್ರಾಮದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದ ಹೆಬ್ಬಾರಮ್ಮನ ಜಾತ್ರಾ ಮಹೋತ್ಸವ ಜರುಗಿತು.
ಜಾತ್ರೆಯಲ್ಲಿ ನೂರಾರು ಭಕ್ತರು ಮಡಿಕೆಯಲ್ಲಿ ಅನ್ನ ಮಾಡಿ ಮಡೆಯನ್ನ ತಯಾರಿಸಿ ದೇವರಿಗೆ ನೈವೇದ್ಯ ಸಮರ್ಪಿಸಿದರು.
ಒಂದು ವಾರದಿಂದ ಜಾತ್ರೆ ನಡೆಯುತ್ತಿದ್ದು, ಹೊನ್ನೇನಹಳ್ಳಿ ಗ್ರಾಮದಿಂದ ಹಿರೀಸಾವೆಗೆ ದೇವರನ್ನ ತರಲಾಯಿತು.
ಹಾಸನದಲ್ಲಿ ನಡೆಯುತ್ತೆ ಹೆಬ್ಬಾರಮ್ಮನ ಜಾತ್ರೆ, ಈಚಲ ಗರಿಯಿಂದ ತಯಾರಿಸ್ತಾರೆ ನೈವೇದ್ಯ - ಜಾತ್ರೆ
ಹಾಸನ ಜಿಲ್ಲೆಯಲ್ಲಿ ವಿಶೇಷವಾಗಿ ಹೆಬ್ಬಾರಮ್ಮನ ಜಾತ್ರೆ ನಡೆಯುತ್ತದೆ.. ಸಾವಿರಾರು ಭಕ್ತರು ಇಲ್ಲಿ ಸೇರಿವುದರೊಂದಿಗೆ ದೇವಿಗೆ ನೈವೇದ್ಯವನ್ನು ಸಮರ್ಪಿಸಲಾಗುತ್ತದೆ.
ಇನ್ನು ಮಡೆಯ ಅನ್ನವನ್ನು ತಯಾರಿಸಲು ಹೆಬ್ಬಾರಮ್ಮನ ಭಕ್ತರು ಒಂದು ದಿನ ಮೊದಲೇ ಹಸಿ ಈಚಲು ಗರಿಯನ್ನು ಸಂಗ್ರಹಿಸುವುದು ವಿಶೇಷ. ಮಡೆ ತಯಾರಾದ ನಂತರ ಎಲ್ಲವನ್ನೂ ಒಂದು ಕಡೆಯಿಟ್ಟು, ಈ ಮಡೆಗಳಿಗೆ ವಿವಿಧ ಪುಷ್ಪಗಳು ಮತ್ತು ಅಡಿಕೆ ಹೊಂಬಾಳೆಯಿಂದ ಅಲಂಕಾರ ಮಾಡಿ, ಸಂಜೆ ಹಿರೀಸಾವೆ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೆಬ್ಬಾರಮ್ಮ ದೇವರ ಹಿಂದೆ ಮೆರವಣಿಗೆ ಮಾಡುವುದು ಜಾತ್ರೆಯ ವಿಶೇಷ.
ಇತ್ತೀಚಿನ ದಿನಗಳಲ್ಲಿ ಈಚಲ ಮರಗಳ ಸಂಖ್ಯೆ ಕಡಿಮೆಯಾಗಿದ್ದು, ಹತ್ತಾರು ಕಿ.ಮೀ. ಸುತ್ತಿ ಭಕ್ತರು ಈಚಲು ಗರಿಯನ್ನು ಸಂಗ್ರಹಿಸಿ ಮಡೆಯನ್ನ ಬೇಯಿಸಿ ದೇವಿಗೆ ಸಮರ್ಪಿಸುವುದು ವಿಶೇಷ.
ಇನ್ನು ಸುತ್ತಮತ್ತಲ ಗ್ರಾಮಸ್ಥರುಗಳು ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ರಂಗಕುಣಿತ, ದೊಳ್ಳು ಕುಣಿತ, ಕೋಲಾಟ ಸೇರಿದಂತೆ ಓಕಳಿ ಎರಚುವ ಮೂಲಕ ಜನರಿಗೆ ಮನರಂಜನೆ ನೀಡಿದ್ರು.