ಕರ್ನಾಟಕ

karnataka

ಹಾವೇರಿ ಜಿಲ್ಲೆಯಲ್ಲಿ ಸಂಭ್ರಮದ ಮಣ್ಣೆತ್ತಿನ ಅಮವಾಸ್ಯೆ

By

Published : Jul 2, 2019, 9:53 PM IST

ರೈತರ ವಿಶೇಷವಾದ ಮಣ್ಣೆತ್ತಿನ ಅಮವಾಸ್ಯೆ ಹಬ್ಬವನ್ನು ಜಿಲ್ಲೆಯಾದ್ಯಂತ ಜನರು ಮಣ್ಣಿನ ಬಸವಣ್ಣನಿಗೆ ಪೂಜೆ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಿದ್ದಾರೆ.

ಮಣ್ಣಿನ ಬಸವಣ್ಣ

ಹಾವೇರಿ: ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಮಣ್ಣಿತ್ತಿನ ಅಮವಾಸ್ಯೆ ಆಚರಿಸಲಾಗುತ್ತಿದೆ. ಮಣ್ಣಿನಿಂದ ಮಾಡಿದ ಬಸವಣ್ಣಗಳನ್ನು ಖರೀದಿಸಿದ ಜನ ಮನೆಗೆ ತಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದರು.

ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಮಣ್ಣಿನ ಬಸವಣ್ಣಗಳ ಖರೀದಿ

ಅನ್ನದಾತನಿಗೆ ಎತ್ತುಗಳೇ ದೇವರು. ಅಲ್ಲದೆ ಈ ಸಮಯದಲ್ಲಿ ಎತ್ತುಗಳಿಂದ ಬಿತ್ತನೆ ಸೇರಿದಂತೆ ಇತರೆ ಕೃಷಿ ಚಟುವಟಿಕೆಗಳನ್ನ ನಡೆಸಲಾಗುತ್ತದೆ. ಇದರಿಂದಾಗಿ ಎತ್ತುಗಳನ್ನು ದೇವರಂತೆ ನೋಡಿಕೊಳ್ಳಬೇಕು ಎಂಬ ಕಲ್ಪನೆಯಿಂದ ಈ ಆಚರಣೆ ರೂಢಿಯಲ್ಲಿದೆ ಎನ್ನುತ್ತಾರೆ ಬಸವಣ್ಣನ ಭಕ್ತರು. ಮಣ್ಣೆತ್ತಿನ ಅಮವಾಸ್ಯೆ ಇರುವ ಹಿನ್ನೆಲೆಯಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಮಣ್ಣಿನ ಬಸವಣ್ಣಗಳ ಮಾರಾಟ ಮತ್ತು ಖರೀದಿ ಭರಾಟೆ ಜೋರಾಗಿತ್ತು.

For All Latest Updates

TAGGED:

ABOUT THE AUTHOR

...view details