ಹಾಸನ: ಕೊರೊನಾ ವೈರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ.
10 ವರ್ಷದಿಂದ ಏನ್ಮಾಡ್ತಿದ್ದಪ್ಪ... ರೇವಣ್ಣ - ಮಾಧುಸ್ವಾಮಿ ನಡುವೆ ವಾಕ್ಸಮರ
ಕೊರೊನಾಗೆ ಸಂಬಂಧಿಸಿದ ಸಭೆ ಅದರ ಬಗ್ಗೆ ಮಾತನಾಡಿ ಎಂದು ಮಾಧುಸ್ವಾಮಿ ಹೇಳಿದರು. ಇದಕ್ಕೆ ಗರಂ ಆದ ರೇವಣ್ಣ , ಕೋವಿಡ್ ಸಭೆ ನೀವು ಮಾಡಿಕೊಳ್ಳಿ .ಅದರ ಅವಶ್ಯಕತೆ ನನಗಿಲ್ಲ. ಕೋವಿಡ್ ಸಭೆ ಮುಗಿದ ಬಳಿಕ ನಾವು ಬರುತ್ತೇವೆ ಎಂದು ಹೊರನಡೆಯಲು ತಮ್ಮ ಪಕ್ಷದ ಶಾಸಕರಿಗೆ ಸೂಚನೆ ನೀಡಿದರು.
ಕೊರೊನಾ ವೈರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಮತ್ತು ಜಿಲ್ಲಾ ಉಸ್ತುವಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ಸಮಸ್ಯೆ ಹೇಳಲು ಮುಂದಾದ ರೇವಣ್ಣರಿಗೆ, ಇದು ಕೊರೊನಾಗೆ ಸಂಬಂಧಿಸಿದ ಸಭೆ ಅದರ ಬಗ್ಗೆ ಮಾತನಾಡಿ ಎಂದು ಮಾಧುಸ್ವಾಮಿ ಹೇಳಿದರು. ಇದಕ್ಕೆ ಗರಂ ಆದ ರೇವಣ್ಣ , ಕೋವಿಡ್ ಸಭೆ ನೀವು ಮಾಡಿಕೊಳ್ಳಿ. ಅದರ ಅವಶ್ಯಕತೆ ನನಗಿಲ್ಲ. ಕೋವಿಡ್ ಸಭೆ ಮುಗಿದ ಬಳಿಕ ನಾವು ಬರುತ್ತೇವೆ ಎಂದು ಹೊರನಡೆಯಲು ತಮ್ಮ ಪಕ್ಷದ ಶಾಸಕರಿಗೆ ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, 10 ವರ್ಷದಿಂದ ಏನ್ಮಾಡ್ತಿದ್ದಪ್ಪ ಎಂದು ಕೋಪದಿಂದಲೇ ರೇವಣ್ಣ ಅವರನ್ನ ಪ್ರಶ್ನೆ ಮಾಡಿದರು.