ಕರ್ನಾಟಕ

karnataka

ETV Bharat / state

ಹಾಸನ ಪೊಲೀಸ್ ವರಿಷ್ಠಾಧಿಕಾರಿಗೆ ಕೋವಿಡ್ ದೃಢ​ - ಹಾಸನ

ದಿನದಿಂದ ದಿನಕ್ಕೆ ಹಾಸನದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಕ್ರವಾರ 241 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ಕೊರೊನಾ ವಕ್ಕರಿಸಿದೆ.

Hassan SP
ಎಸ್​ಪಿ ಆರ್.ಶ್ರೀನಿವಾಸ್ ಗೌಡ

By

Published : Apr 17, 2021, 6:43 AM IST

ಹಾಸನ:ಎಸ್​ಪಿ ಆರ್.ಶ್ರೀನಿವಾಸ್ ಗೌಡ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 7 ದಿನಗಳ ಕಾಲ ಹೋಂ ಐಸೋಲೇಷನ್​ಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ.

ಶುಕ್ರವಾರ ಸಂಜೆ ಆರೋಗ್ಯದಲ್ಲಿ ಸಮಸ್ಯೆಯುಂಟಾಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಟ್ಟ ವೇಳೆ ಸೋಂಕು ದೃಢಪಟ್ಟಿದೆ. ಕೋವಿಡ್ ಸಂದರ್ಭದಲ್ಲಿ ಹಗಲಿರುಳು ಎನ್ನದೆ ಕೆಲಸ ನಿರ್ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಂದಿನಿಂದ ಇಲ್ಲಿಯವರೆಗೆ ಕೊರೊನಾ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಎಸ್​ಪಿ ಆರ್.ಶ್ರೀನಿವಾಸ್ ಗೌಡ ಅವರಿಗೆ ಕೋವಿಡ್ ದೃಢ​

ಎಸ್​ಪಿಗೆ ಸೋಂಕು ದೃಢಪಟ್ಟಿರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಹಾಸನ ಪೊಲೀಸ್ ಇಲಾಖೆಯ ಸಿಬ್ಬಂದಿಯು ಎಸ್​ಪಿ ಬೇಗ ಗುಣಮುಖವಾಗಲೆಂದು ಇಂದು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಮಸೀದಿ ಹಾಗೂ ಚರ್ಚ್​ಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಈವರೆಗೆ ಹಾಸನದಲ್ಲಿ ಸುಮಾರು 31,379 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 29,524 ಮಂದಿ ಗುಣಮುಖರಾಗಿದ್ದಾರೆ. ಶುಕ್ರವಾರ ಇಬ್ಬರು ಸಾವನ್ನಪ್ಪಿದರೆ, ಒಂದು ವರ್ಷದಲ್ಲಿ ಸುಮಾರು 487 ಮಂದಿ ಸಾವನ್ನಪ್ಪಿದ್ದಾರೆ. 25 ಮಂದಿ ಐಸಿಯುನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದು, 1,368 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details