ಸಕಲೇಶಪುರ(ಹಾಸನ) : ತಾಲೂಕಿನ ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ಹಳೆಯ ಕಪ್ಪು ಬಿಳುಪು ಟಿವಿ , ರೇಡಿಯೋ ಹಾಗೂ ಟೇಪ್ ರೆಕಾರ್ಡರ್‌ಗಳಿಗೆ ವ್ಯಾಪಕ ಬೇಡಿಕೆ ಕಂಡು ಬಂದಿದ್ದು, ಗಾಳಿ ಸುದ್ದಿಗಳನ್ನು ನಂಬಿ ಕೆಲ ಜನ ಈ ಹಳೆಯ ವಸ್ತುಗಳಿಗೆ ದುಬಾರಿ ಬೆಲೆ ಕೊಟ್ಟು, ಕೊಳ್ಳಲು ಮುಂದಾಗುತ್ತಿದ್ದಾರೆ.
ಹಳೆಯ ಟಿವಿ, ರೇಡಿಯೋಗೆ ಹೆಚ್ಚಿದ ಬೇಡಿಕೆ... ಗಾಳಿ ಸುದ್ದಿಗೆ ಮರುಳಾಗುತ್ತಿರುವ ಜನ! - latest news of hassan
ತಾಲೂಕಿನ ಗಾಣದಹೊಳೆ, ಹೆಬ್ಬಸಾಲೆ, ಬೆಳ್ಳೆಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಗಾಳಿ ಸುದ್ದಿ ವ್ಯಾಪಕವಾಗಿ ಹಬ್ಬಿದ್ದು, ಜನರು ಎಲ್ಲೋ ಮೂಲೆಯಲ್ಲಿ ಬಿಸಾಕಿದ್ದ ಹಳೆಯ ಟಿವಿ, ರೇಡಿಯೋಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.
ತಾಲೂಕಿನ ಗಾಣದಹೊಳೆ, ಹೆಬ್ಬಸಾಲೆ, ಬೆಳ್ಳೆಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಈ ಗಾಳಿ ಸುದ್ದಿ ವ್ಯಾಪಕವಾಗಿ ಹಬ್ಬಿದ್ದು, ಜನರು ಎಲ್ಲೋ ಮೂಲೆಯಲ್ಲಿ ಬಿಸಾಕಿದ್ದ ಹಳೆಯ ಟಿವಿ, ರೇಡಿಯೋಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ. ಹಾಗೆಯೇ ಕೆಲವು ಜನರು ಈ ವಸ್ತುಗಳನ್ನು ಖರೀದಿಸಿ ಶೇಖರಿಸಿಡಲು ಮುಂದಾಗುತ್ತಿದ್ದಾರೆ.
ಈಗಾಗಲೇ ಕೆಲವರು ಈ ಹಳೆಯ ಟಿವಿ ಹಾಗೂ ರೇಡಿಯೋಗಳನ್ನು ಹೆಚ್ಚಿಗೆ ಬೆಲೆ ನೀಡಿ ಖರೀದಿ ಮಾಡಿದ್ದು, ಯಾರಿಗೆ ಮಾರಟ ಮಾಡಬೇಕು ಎಂದು ತೋಚದೆ ಪರದಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಳೆಯ ವಸ್ತುಗಳ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸುತ್ತಿರುವ ಹಿನ್ನೆಲೆ ಜನರು ಈ ರೀತಿ ಮರುಳಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೆಲವು ಸ್ಥಳೀಯರು ಆಗ್ರಹ ಮಾಡಿದ್ದಾರೆ.