ಹಾಸನ: ಕಾರ್ಗಿಲ್ ಯುದ್ಧ ನಡೆದು ಇಂದಿಗೆ 21 ವರ್ಷಗಳು ಕಳೆದಿವೆ. ಅವತ್ತು ಕಾಶ್ಮೀರದ ಗಾರ್ಕೋನ್ ಗಾವ್ ಗ್ರಾಮದ ಸೊಸಿ ನಂಬಿಯಾರ್ ಎಂಬ ಯುವಕ ನೀಡಿದ ಒಂದು ಮಾಹಿತಿ ಕಾರ್ಗಿಲ್ ಯುದ್ಧ ನಡೆಯಲು ಕಾರಣವಾಯಿತು. ಪಾಕಿಸ್ತಾನದ ಸೈನಿಕರು ಎಷ್ಟು ಕ್ರೂರಿ ಎಂಬುದಕ್ಕೆ ಅವರು ನಡೆಸಿರುವ ಈ ದುಷ್ಕೃತ್ಯ ಸಾಕ್ಷಿ.
ಯುವಕ ನೀಡಿದ ಮಾಹಿತಿಯ ಆಧಾರದ ಮೇಲೆ 1999 ಮೇ ತಿಂಗಳ 2ನೇ ತಾರೀಖು ಭಾರತೀಯ ಸೈನಿಕರನ್ನು ನಾಲ್ಕು ಪೆಟ್ರೋಲಿಂಗ್ ಟೀಮ್ ಮಾಡಿ ಬೇರೆ ಬೇರೆ ಪ್ರದೇಶಗಳಿಗೆ ವೀಕ್ಷಣೆ ಮಾಡಲು ಭಾರತ ಕಳಿಸಿಕೊಡುತ್ತದೆ. ವೀಕ್ಷಣೆ ಮಾಡಿದ ಮೂರು ತಂಡಗಳು ವಾಪಸ್ ಬರುತ್ತೆ. ಆದರೆ ಲೆಫ್ಟಿನೆಂಟ್ ಸೌರಬ್ ಕಾಲಿಯಾ ಎಂಬ ಐದು ಜನರಿದ್ದ ಒಂದು ತಂಡ ಮಾತ್ರ ವಾಪಸ್ ಬರುವುದಿಲ್ಲ.
ಕಾರ್ಗಿಲ್ ಕರಾಳತೆಯ ಸ್ಥಿತಿಗತಿಗಳನ್ನು ಬಿಚ್ಚಿಟ್ಟ ಹಾಸನದ ಮಾಜಿ ಯೋಧರು ಕಾರಣ ಪಾಕಿಸ್ತಾನದ ನರ ರೂಪದ ರಾಕ್ಷಸರು ಯೋಧರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅದನ್ನ ಚೀಲದೊಳಗೆ ತುಂಬಿ ಕತ್ತೆಗಳ ಮೇಲೆ ಹೊರಿಸಿ ಭಾರತಕ್ಕೆ ಕಳಿಸಿಕೊಡುತ್ತಾರೆ. ಇದರಿಂದ ಎಚ್ಚೆತ್ತುಕೊಂಡ ಭಾರತ ತತ್ಕ್ಷಣ ಸೈನ್ಯ ಪಡೆಯೊಂದಿಗೆ ಯುದ್ಧವನ್ನು ಘೋಷಣೆ ಮಾಡುತ್ತದೆ. ಎದುರಾಳಿಯನ್ನು ಸದೆಬಡಿದು ಕೊನೆಗೂ ಕಾರ್ಗಿಲ್ನನ್ನು ವಶಕ್ಕೆ ಪಡೆಯುತ್ತೆ.
ಆ ಯುದ್ಧದಲ್ಲಿ ಸುಮಾರು 523 ಮಂದಿ ವೀರಮರಣವನ್ನಪ್ಪುತ್ತಾರೆ. ಒಂದು ಕಡೆ ವಿಜಯೋತ್ಸವ, ಮತ್ತೊಂದು ಕಡೆ ಯುದ್ಧವನ್ನು ಗೆದ್ದು ಬಂದ, 1356 ಮಂದಿಯ ಮರುಹುಟ್ಟು, ಅದು ನಿಜಕ್ಕೂ ರೋಚಕ. ನಾಳೆ ಕಾರ್ಗಿಲ್ ವಿಜಯೋತ್ಸವ. ಆದರೆ ಡಿಸೆಂಬರ್ 16 ರಂದು ಆಚರಣೆ ಮಾಡಲಾಗುತ್ತದೆ. ಯಾಕಂದ್ರೆ 1971ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ವಿಭಜನೆಯಾದ ದಿನ. ಆ ದಿನ ಕಾರ್ಗಿಲ್ ಯುದ್ಧಕ್ಕಿಂತ ದೊಡ್ಡ ವಿಜಯೋತ್ಸವ ಎಂಬುದು ಹೆಮ್ಮೆಯ ವಿಚಾರ.
ಕಾರ್ಗಿಲ್ ಯುದ್ಧದಲ್ಲಿ ಹಾಸನದ ಯೋಧರು ಕೂಡ ಭಾಗಿಯಾಗಿದ್ದು ಮತ್ತೊಂದು ವಿಶೇಷ. ಕಷ್ಟಗಳನ್ನು ಲೆಕ್ಕಸದೆ, ಆಹಾರ ಇತ್ಯಾದಿಗಳನ್ನು ತ್ಯಜಿಸಿ ಶತ್ರುಗಳ ಎದೆ ಸೀಳಲು ಭಾರತೀಯ ಸೈನಿಕರು ಪಟ್ಟ ಕಷ್ಟ, ಸವಾಲುಗಳ ಸರಮಾಲೆಗಳನ್ನು ನಿವೃತ್ತ ಯೋಧರು ಮತ್ತು ಕರ್ನಲ್ಗಳು ಈಟಿವಿ ಭಾರತದ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ..