ಅರಕಲಗೂಡು:ತಾಲ್ಲೂಕಿನ ಕನ್ನಡ ಸಾಂಸ್ಕೃತಿಕ, ಸಾಹಿತ್ಯ ನಾಡು ನುಡಿಗಳ ಆಸಕ್ತ ಪ್ರಿಯರಿಗೆ ಡಾ.ಅ.ನ.ಕೃ. ಕನ್ನಡ ಸಾಹಿತ್ಯ ಭವನ ಹಾಗೂ ಡಿ. ದೇವರಾಜ ಅರಸು ಭವನಗಳ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಭೂಮಿ ಮಂಜೂರಾತಿ ದೊರಕಿಸಿ ಕೊಟ್ಟು ಈ ವರ್ಷ ಕನ್ನಡ ರಾಜ್ಯೋತ್ಸವ ಹಾಗೂ ದಸರಾ ಹಬ್ಬದ ಉಡುಗೊರೆಯಾಗಿ ತಾಲ್ಲೂಕಿನ ಜನತೆಗೆ ನೀಡಲಾಗಿದೆ ಎಂದು ಶಾಸಕ ಎ.ಟಿ ರಾಮಸ್ವಾಮಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಡಿ ದೇವರಾಜ ಅರಸು ಭವನ ನಿರ್ಮಾಣಕ್ಕೆ ಒಂದು ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿ ಈಗಾಗಲೇ 50 ಲಕ್ಷ ಹಣ ಬಿಡುಗಡೆ ಮಾಡಲಾಗಿದ್ದು, ಅದು ನಿರ್ಮಿತಿ ಕೇಂದ್ರ ಖಾತೆಯಲ್ಲಿ ಠೇವಣಿ ಇಡಲಾಗಿದೆ ಅರಸು ಭವನ ನೀಲ ನಕ್ಷೆ ತಯಾರಿ ಕೆಲಸ ಮುಗಿದ ತಕ್ಷಣ ಕಟ್ಟಡದ ಶಂಕುಸ್ಥಾಪನೆ ಮಾಡಲಾಗುವುದು ಎಂದರು.
ಡಾ. ಅ.ನ.ಕೃ ಕನ್ನಡ ಸಾಹಿತ್ಯ ಭವನ ಮತ್ತು ಗ್ರಂಥಾಲಯ ನಿರ್ಮಾಣಕ್ಕೆ ಈಗಾಗಲೇ ಸರ್ಕಾರ 50 ಲಕ್ಷ ಹಣ ಬಿಡುಗಡೆ ಮಾಡಿದೆ ಎರಡು ಭವನಗಳ ಶಂಕುಸ್ಥಾಪನೆ ಒಂದೇ ದಿನ ನಿಗದಿ ಮಾಡಿಕೊಳ್ಳಲುವಂತೆ ಶಾಸಕರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಹಳೆ ತಾಲ್ಲೂಕು ಕಛೇರಿ ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸರ್ವೇ ನಡೆಸಿ ಕ್ರಮ ಬದ್ಧವಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ವಿಜಯ ದಶಮಿ ಹಬ್ಬದ ಪ್ರಯುಕ್ತ ನಾಳೆ ಜರುಗಲಿರುವ ದಸರಾ ಹಬ್ಬ ಉದ್ಘಾಟನೆಯನ್ನು ಗ್ರಾಮದೇವತೆ ದೊಡ್ಡಮ್ಮ ತಾಯಿ ಸನ್ನಿಧಿ ಪೂಜೆ ಕಾರ್ಯ ನೆರವೇರಿಸು ಮೂಲಕ ಸರಳವಾಗಿ ನೆಡಲಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ನಿರಂತರವಾಗಿ ನಾಡು ನುಡಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಯುವಂತೆ ಅನುಕೂಲ ಮಾಡಿಕೊಟ್ಟ ಶಾಸಕ ಎ.ಟಿ ರಾಮಸ್ವಾಮಿಯವರ ಪಾತ್ರ ದೊಡ್ಡದು ಎಂದು ತಾಲ್ಲೂಕು ಕನ್ನಡ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.