ಕರ್ನಾಟಕ

karnataka

ETV Bharat / state

ರಾಸಲೀಲೆ ಬಗ್ಗೆ ಬಿಜೆಪಿಯವರೇ ಉತ್ತರಿಸಲಿ: ಹೆಚ್​​ಡಿ ರೇವಣ್ಣ - ಹೆಚ್​ಡಿ ರೇವಣ್ಣ ಲೇಟೆಸ್ಟ್​ ನ್ಯೂಸ್

ರಾಸಲೀಲೆ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆದ್ದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಅಭಿಪ್ರಾಯಪಟ್ಟರು.

HD REVANNA
ರಾಸಲೀಲೆ ಬಗ್ಗೆ ಬಿಜೆಪಿಯವರೇ ಉತ್ತರಿಸಲಿ: ಹೆಚ್​​ಡಿ ರೇವಣ್ಣ

By

Published : Mar 4, 2021, 4:31 AM IST

ಹಾಸನ :ರಮೇಶ್ ಜಾರಕಿಹೊಳಿ ರಾಸಲೀಲೆ ಎನ್ನಲಾದ ವಿಡಿಯೋಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ನನಗೆ ಈ ವಿಚಾರ ಗೊತ್ತಿಲ್ಲ.ಆದ್ದರಿಂದ ಈ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಹೆಚ್​​ಡಿ ರೇವಣ್ಣ

ಹಾಸನದಲ್ಲಿ ಈ ಬಗ್ಗೆ ಮಾತನಾಡಿದ ಹೆಚ್​.ಡಿ.ರೇವಣ್ಣ, ವಿಚಾರ ಗೊತ್ತಿಲ್ಲದೇ ನಾನೇನೂ ಮಾತನಾಡುವುದಿಲ್ಲ. ಈ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬಳಿಯೇ ಕೇಳಿ. ಅವರೇ ಏನಾಯ್ತು ಎಂದು ಹೇಳ್ತಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಸಹೋದರನ ವಿರುದ್ಧ ದೂರು ನೀಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ: ಬಾಲಚಂದ್ರ ಜಾರಕಿಹೊಳಿ ಚಿಂತನೆ

ಈ ಬಗ್ಗೆ ಬಿಜೆಪಿ ಪಕ್ಷದವರೇ ನಿರ್ಧಾರ ತೆಗೆದುಕೊಳ್ಳಲಿ. ನಾಳೆ ಅಧಿವೇಶನವಿದ್ದು, ಅಲ್ಲಿ ಏನು ನಡೆಯುತ್ತದೆ ಎಂಬುದನ್ನು ನೋಡೋಣ. ನಾನು ಬೆಂಗಳೂರಿನ ನಾಯಕನಲ್ಲ. ಹೊಳೆನರಸೀಪುರ ಶಾಸಕನಷ್ಟೇ. ಹಾಗಾಗಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಹೆಚ್​.ಡಿ.ರೇವಣ್ಣ ಹೇಳಿದರು.

ABOUT THE AUTHOR

...view details