ಕರ್ನಾಟಕ

karnataka

ETV Bharat / state

ಹೆಚ್​ಡಿಕೆಯಿಂದ ಸಹಾಯ ಪಡೆದವರೇ ಅವರನ್ನು ಈಗ ತೆಗಳುತ್ತಿದ್ದಾರೆ: ಹೆಚ್.ಡಿ. ರೇವಣ್ಣ - ರಾಜ್ಯದ ರಾಜಕೀಯ ಸ್ಥಿತಿ

ದೇಶದ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನು ನಂಬುವಂತಹ ಸ್ಥಿತಿಯಲ್ಲಿಲ್ಲ ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್​ಡಿಕೆಯಿಂದ ಸಹಾಯ ಪಡೆದವರೇ ಅವರನ್ನು ಈಗ ತೆಗಳುತ್ತಿದ್ದಾರೆ: ರೇವಣ್ಣ
ಹೆಚ್​ಡಿಕೆಯಿಂದ ಸಹಾಯ ಪಡೆದವರೇ ಅವರನ್ನು ಈಗ ತೆಗಳುತ್ತಿದ್ದಾರೆ: ರೇವಣ್ಣ

By

Published : Oct 19, 2021, 3:02 AM IST

ಹಾಸನ:ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯಿಂದಲೇ ಸಹಾಯ ಪಡೆದವರು ಈಗ ಅವರನ್ನೇ ತೆಗಳುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಷ್ಟ್ರೀಯ ಪಕ್ಷಗಳ ಕೆಲವು ಮುಖಂಡರ ವರ್ತನೆ ಹಾಗು ಮಾತುಗಳನ್ನು ಗಮನಿಸಿದ್ದೇನೆ. ಹೆಚ್​ಡಿಕೆ ಕೋಮುವಾದಿ ನಾಯಕರ ಜೊತೆ ಸೇರಿದ್ದಾರೆ ಎಂದು ಆರೋಪಿಸಿ, ಸಿಂದಗಿ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ ನೀಡಬೇಡಿ ಎಂದು ಎಂದು ಪ್ರಚಾರ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯನವರ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಎರಡು ರಾಷ್ಟ್ರೀಯ ಪಕ್ಷಗಳು ಒಂದಾಗಿ ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸೋಲಿಸಿದರು. ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಅಧಃಪತನದತ್ತ ಸಾಗಿದೆ. ಇದೇ ಕಾಂಗ್ರೆಸ್ ಪಕ್ಷದ ನಾಯಕರು ಮಾಜಿ ಪ್ರಧಾನಿ ದೇವೇಗೌಡರನ್ನು ಅಧಿಕಾರದಿಂದ ಇಳಿಸಿದರು .

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರೇ ದೇವೇಗೌಡರ ಮನೆಗೆ ಬಂದು ಸರ್ಕಾರ ರಚನೆ ಮಾಡಿಸಿ, ಕೊನೆಗೆ ಸರ್ಕಾರ ತೆಗೆದರು. ಇಡೀ ದೇಶದಲ್ಲಿ ಮುಸಲ್ಮಾನ ಸಮುದಾಯಕ್ಕೆ ಮೀಸಲಾತಿ ನೀಡಿದ್ದು, ಹೆಚ್.ಡಿ.ದೇವೇಗೌಡರು ಮಾತ್ರ. ಸಿ.ಎಂ.ಇಬ್ರಾಹಿಂ ಅವರನ್ನು ಕಾಂಗ್ರೆಸ್ ನಾಯಕರು ದುಡಿಸಿಕೊಂಡು ಮೂಲೆಗುಂಪು ಮಾಡಿದರು ಎಂದಿದ್ದಾರೆ.

ಮಾಜಿ ಸಚಿವ ಹೆಚ್.ಡಿ. ರೇವಣ್ಣ

ರೇವಣ್ಣ ಸವಾಲ್: ಕುಮಾರಸ್ವಾಮಿ ಯಾರೊಂದಿಗೂ ಡೀಲಿಂಗ್ ಮಾಡಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ, ಡೀಲಿಂಗ್, ಪರ್ಸೆಟೆಂಜ್ ಬಗ್ಗೆ ಕಾಲ ಬಂದಾಗ ಹೇಳುತ್ತೇನೆ. ಕುಮಾರಣ್ಣನ ಬಳಿ ಸಹಾಯ ಪಡೆದು ಈಗ ಅವರನ್ನೇ ತೆಗಳುತ್ತಿದ್ದಾರೆ. ರಾಜ್ಯಸಭೆ, ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಮತ ಹಾಕಲು ನಾನು ಹಣ ಪಡೆದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲ್ ಹಾಕಿದರು.

ಹೊಂದಾಣಿಕೆ ರಾಜಕೀಯ: ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಪಕ್ಷದವರು ಉತ್ತಮ ಖಾತೆ ಪಡೆದರು. 2004ರ ಧರ್ಮಸಿಂಗ್ ಕಾಲದಲ್ಲಿ ಜೆಡಿಎಸ್ ಪಕ್ಷದವರು ಖಾತೆ ಪಡೆಯಲು 8 ತಿಂಗಳು ಕಾಯಬೇಕಾಯಿತು. 2018ರಲ್ಲಿ ನನಗೆ ಇಂಧನ ಖಾತೆ ಸಿಗದಂತೆ ಮಾಡಿದರು. ದೇಶದ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನು ನಂಬುವಂತಹ ಸ್ಥಿತಿಯಲ್ಲಿಲ್ಲ. ಯಾಕೆ ಅಂದ್ರೆ ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಕೆಲವು ಶಾಸಕರಿಗೆ ಕೋಟಿಗಟ್ಟಲೇ ಹಣ:ಮುಸ್ಲಿಂ ಅಭ್ಯರ್ಥಿ ಫಾರುಕ್ ಸೋಲಿಸಲು ಕೆಲವು ಶಾಸಕರು ಕೋಟಿಗಟ್ಟಲೆ ಹಣ ಪಡೆದಿದ್ದಾರೆ. ಹಣ ಪಡೆದಿಲ್ಲ ಎಂದ ಮೇಲೆ ಕಾಂಗ್ರೆಸ್ ನಾಯಕರು ದೇವರ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಸವಾಲ್ ಹಾಕಿದರು. ಕಾಂಗ್ರೆಸ್ ಪಕ್ಷ 60 ವರ್ಷ ಆಡಳಿತ ನಡೆಸಿ ಪರಿಶಿಷ್ಠ ಸಮುದಾಯದವರಿಗೆ ಉತ್ತಮ ಹುದ್ದೆ ನೀಡಲಿಲ್ಲ.

25 ವರ್ಷಗಳ ಹಿಂದೆ ಮಹಿಳಾ ಮೀಸಲಾತಿಗೆ ಮಂಡಿಸಿದ ಬಿಲ್ ಲೋಕಸಭೆಯಲ್ಲಿ ಹಾಗೆ ಬಿದ್ದಿದೆ. ಇದಕ್ಕೆ ಎರಡೂ ಪಕ್ಷಗಳು ಕಾರಣ. ಕಾಶ್ಮೀರದ ಗುಲಾಂ ನಬಿ ಆಜಾದ್‌ರನ್ನು ಸಂಸದ ಸ್ಥಾನ ಹಾಗೂ ರಾಜ್ಯಸಭೆ ವಿರೋಧ ಪಕ್ಷ ಸ್ಥಾನ ಕೊಡದೆ ಮೂಲೆಗುಂಪು ಮಾಡಿದ್ರು. ಕೋಲಾರದ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ದು ಯಾರು ಎಂದು ಆತ್ಮವಲೋಕನ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.

ಕನಸು ಕಾಣಬೇಕು ಅಷ್ಟೆ:ಹೆಚ್.ಡಿ.ರೇವಣ್ಣ ಉಪಮುಖ್ಯಮಂತ್ರಿ ಆಗುವುದನ್ನು ಹೆಚ್.ಡಿ.ಕುಮಾರಸ್ವಾಮಿ ಸಹಿಸಲಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅವರಿಗೆ ನಮ್ಮ ಸುದ್ದಿ ಬೇಡ. ಕುಮಾರಸ್ವಾಮಿ ಮತ್ತು ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಕನಸು ಕಾಣಬೇಕು ಅಷ್ಟೆ. ನಾವಿಬ್ಬರೂ ಏನೆಂದು ರಾಜ್ಯಕ್ಕೆ ಗೊತ್ತಿದೆ ಎಂದು ಆಕ್ರೋಶ ರೇವಣ್ಣ ವ್ಯಕ್ತಪಡಿಸಿದರು.

ABOUT THE AUTHOR

...view details