ಕರ್ನಾಟಕ

karnataka

ETV Bharat / state

ಸಂವಿಧಾನ ತಿದ್ದುವವರಿಗೆ ಮತ ಕೊಡಬೇಡಿ, ಪ್ರಜ್ವಲ್​ಗೆ ನೀಡಿ: ಸಿದ್ದರಾಮಯ್ಯ - hassan

ಮೈತ್ರಿ ಅಭ್ಯರ್ಥಿ ಪರ ಸಿದ್ದರಾಮಯ್ಯ ಭರ್ಜರಿ ಪ್ರಚಾರ ಕೈಗೊಂಡಿದ್ದು, ಪ್ರಜ್ವಲ್​ ರೇವಣ್ಣಗೆ ಮತ ನೀಡುವಂತೆ ವಿನಂತಿಸಿಕೊಂಡರು.

ಮಾಜಿ ಸಿಎಂ ಸಿದ್ದರಾಮಯ್ಯ

By

Published : Apr 12, 2019, 11:28 PM IST

ಹಾಸನ/ಹೊಳೆನರಸೀಪುರ: ಸಂವಿಧಾನ ತಿದ್ದುವ ಹೇಳಿಕೆ ನೀಡುವ ಬಿಜೆಪಿಗೆ ಮತ ಕೊಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ತಾಲೂಕಿನ ಹಳ್ಳಿ ಮೈಸೂರು ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಪ್ರಸ್ತುತ ಲೋಕಸಭಾ ಚುನಾವಣೆಗೆ ಒಬ್ಬ ಕುರುಬ ಸಮಾಜದ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಟಿಕೆಟ್ ನೀಡಿಲ್ಲ. ಹಳ್ಳಿ ಮೈಸೂರು ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಮುಂದಿನ ದಿನಗಳಲ್ಲಿ ಶ್ರಮ ವಹಿಸುತ್ತೇನೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಭ್ಯರ್ಥಿ ಎ.ಮಂಜು ಒಬ್ಬ ಸುಳ್ಳುಗಾರ. ಕಾಂಗ್ರೆಸ್ ಅವನಿಗೆ ಮಂತ್ರಿಸ್ಥಾನ ಕೊಟ್ಟಿತ್ತು. ನನ್ನ ಬಳಿ ಬಿಜೆಪಿ ಪಕ್ಷೆಕ್ಕೆ ಹೋಗುವುದಿಲ್ಲ ಅಣ್ಣ ಎಂದು ಹೇಳಿ, ಅಂತಿಮವಾಗಿ ಕಮಲ ಪಕ್ಷ ಹಿಡಿದಿದ್ದಾನೆ. ಯಾವುದೇ ಕಾರಣಕ್ಕೂ ಆತನಿಗೆ ಮತ ಕೊಡಬೇಡಿ. ಪ್ರಜ್ವಲ್​ಗೆ ಮತ‌ ನೀಡಿದರೆ ನನಗೆ ಮತ ಕೊಟ್ಟಂತೆ ಎಂದರು.

ಹೆಚ್.ಡಿ.ದೇವೇಗೌಡ ಮಾತನಾಡಿ, ನನ್ನ 70 ವರ್ಷದ ರಾಜಕೀಯ ಏಳುಬೀಳುಗಳಲ್ಲಿ ಹಳ್ಳಿ ಮೈಸೂರು ವಿಭಾಗದ ಕೆಲ ಮುಖಂಡರು ನನ್ನ ಜೊತೆ ಇದ್ದು ನನ್ನನ್ನು ಬೆಳೆಸಿದ್ದಾರೆ. ಇಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ನಡವಳಿಕೆಗಳು ಕ್ಷೀಣಿಸುತ್ತಿವೆ. ರೈತರಿಗೆ ಮೋದಿ ಮೂರು ಕಾಸಿನ ಸಹಾಯ ಮಾಡಲಿಲ್ಲ. ಸಿದ್ದರಾಮಯ್ಯ ಮಂತ್ರಿಯಾದ ಮತ್ತು ಪ್ರಸ್ತುತ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಮಾಡುವಲ್ಲಿ ಹೆಜ್ಜೆ ಇಟ್ಟಿದೆ ಎಂದರು.

ABOUT THE AUTHOR

...view details