ಹಾಸನ: ನಗರದ ಹೇಮಾವತಿ ಪ್ರತಿಮೆ ಬಳಿ ನಿರ್ಮಾಣವಾಗಿರುವ ಟ್ಯಾಕ್ಸಿ ಸ್ಟ್ಯಾಂಡ್ ಮತ್ತೆ ಸುದ್ದಿಯಲ್ಲಿದ್ದು, ಜೆಡಿಎಸ್, ಬಿಜೆಪಿ ನಡುವಿನ ರಾಜಕೀಯ ತಿಕ್ಕಾಟದ ವೇದಿಕೆಯಾಗಿ ಮಾರ್ಪಟ್ಟಿದೆ.
ನಗರದ ಹೇಮಾವತಿ ಪ್ರತಿಮೆ ಬಳಿ ಜಿಲ್ಲೆಯ ಶಾಸಕ ಪ್ರೀತಂ ಜೆ .ಗೌಡ ಶಾಸಕರ ನಿಧಿಯಡಿ ಟ್ಯಾಕ್ಸಿ ಸ್ಟ್ಯಾಂಡ್ ನಿರ್ಮಾಣ ಮಾಡಲಾಗಿದ್ದು, ಸಹಜವಾಗಿಯೇ ಅಲ್ಲಿ ಕೊಡುಗೆ ನೀಡಿದ ಶಾಸಕ ಪ್ರೀತಂ ಜೆ ಗೌಡ ಎಂದು ಅವರ ಭಾವಚಿತ್ರವನ್ನು ಹಾಕಲಾಗಿದೆ.
ನಗರದ ಹೇಮಾವತಿ ಪ್ರತಿಮೆ ಬಳಿ ನಿರ್ಮಾಣವಾಗಿರುವ ಟ್ಯಾಕ್ಸಿ ಸ್ಟ್ಯಾಂಡ್ ಆದರೆ ಈಗಿರುವ ನಾಮಫಕಲಕ ಪಕ್ಕದಲ್ಲಿ ಮತ್ತೊಂದು ನಾಮಫಲಕವನ್ನು ಹಾಕಲು ಸಿದ್ಧತೆ ನಡೆಸಲಾಗಿತ್ತು. ಇದನ್ನು ಸಹಿಸಲಾಗದ ಜೆಡಿಎಸ್ ಬೆಂಬಲಿತ ಟ್ಯಾಕ್ಸಿ ಚಾಲಕರು ಪ್ರೀತಮ್ ಜೆ ಗೌಡರ ಫೋಟೋ ಹಾಕಲೆಂದು ಮೀಸಲಿರಿಸಿದ್ದ ಸ್ಥಳದಲ್ಲಿ ಪ್ರಜ್ವಲ್ ರೇವಣ್ಣರ ಫೋಟೋ ಹಾಕಿದರೆ ಕಿತ್ತಾಟ ಆಗುತ್ತದೆ ಎಂದು ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್. ಡಿ .ದೇವೇಗೌಡ ಭಾವಚಿತ್ರವನ್ನು ಹಾಕಲಾಗಿದೆ. ಇದೀಗ ಇದು ಬಿಜೆಪಿಯನ್ನು ಪೆಚ್ಚಿಗೆ ಸಿಲುಕುವಂತೆ ಮಾಡಿದೆ.
ಈ ಹಿಂದೆ ಜಿಲ್ಲೆಯ ಜನಪರ ಜಿಲ್ಲಾಧಿಕಾರಿ ಎಂದೆ ಹೆಸರಾಗಿದ್ದ ಡಿಸಿ ಅಕ್ರಂಪಾಷ ಅವರು ಇದೇ ಸ್ಥಳದ ವಿಚಾರವಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಟ್ಯಾಕ್ಸಿ ಸ್ಟಾಂಡ್ಗೆ ಮೇಲ್ಚಾವಣಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಕ್ಕೆ ವರ್ಗಾವಣೆ ಮಾಡಿಸಲಾಯಿತು ಎಂಬ ಮಾತುಗಳು ಕೇಳಿ ಬಂದಿದ್ದವು.