ಕರ್ನಾಟಕ

karnataka

ETV Bharat / state

ಹಾಸನ​: ಮಾರುಕಟ್ಟೆ ತೆರೆದರೂ ಜನರ ಸುಳಿವೇ ಇಲ್ಲ!

ಮಾರುಕಟ್ಟೆ ತೆರೆದರೂ ಜನರು ತರಕಾರಿ ಖರೀದಿಸಲು ಬಾರದ ಕಾರಣ ವ್ಯಾಪಾರಸ್ಥರು ನಿರಾಶೆಯಿಂದ ವಾಪಸ್​ ಹೋಗಬೇಕಾಯಿತು.

Corona Effect: The new market is open in hassan but people doesnt came for buy
ಕೊರೊನಾ ಎಫೆಕ್ಟ್​: ಮಾರುಕಟ್ಟೆ ತೆರೆದರೂ ಜನರ ಸುಳಿವೇ ಇಲ್ಲ

By

Published : Apr 2, 2020, 9:06 PM IST

ಹಾಸನ: ಜನಸಂದಣಿ ತಡೆಯಲು ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ತರಕಾರಿ ವ್ಯಾಪಾರವನ್ನು ಹೊಸ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಶಿಫ್ಟ್​ ಮಾಡಲಾಗಿತ್ತು. ಮಂಗಳವಾರ ಮೊದಲ ದಿನ ಭರ್ಜರಿ ತರಕಾರಿ ವ್ಯಾಪಾರ ನಡೆಯಿತು. ಆದರೆ ಗುರುವಾರ ವ್ಯಾಪಾರವಿಲ್ಲದೇ ವ್ಯಾಪಾರಸ್ಥರು ವಾಪಸ್ ಮನೆಗೆ ತೆರಳಬೇಕಾಯಿತು.​

ವಾರದಲ್ಲಿ 4 ದಿನ ಹಾಸನ ನಗರದ ಮೂರು ಭಾಗಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ನೋಡಿಕೊಳ್ಳಲು ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ ಕಾಯುತ್ತಿದ್ದರು.

ಬೆಳಗ್ಗೆ 7 ಗಂಟೆಯಿಂದ 12 ಗಂಟೆಯವರೆಗೂ ತರಕಾರಿ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದ್ದರೂ 11 ಗಂಟೆಗೆ ತೆರವು ಮಾಡಲು ಸೂಚಿಸಿದ್ದರಿಂದ ತರಕಾರಿ ವ್ಯಾಪಾರಸ್ಥರು ಕೂಡ ನಿರಾಸೆಯಲ್ಲಿ ವಾಪಸ್ ಹೋದರು.

ABOUT THE AUTHOR

...view details