ಹಾಸನ:ರಾಜ್ಯದ 18 ಕ್ಷೇತ್ರಗಳಲ್ಲಿ ಸಂಕಲ್ಪ ಯಾತ್ರೆ ಮುಗಿಸಿ ಹಾಸನಕ್ಕೆ ಬಂದಿದ್ದೇವೆ. ಇದಕ್ಕೆ ಎಲ್ಲೆಡೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹಳೇ ಫ್ರೆಂಡ್ಸ್‌ಗಳು ಮತ್ತೆ ಕಾಂಗ್ರೆಸ್ ಪಕ್ಷ ಸೇರ್ತಾರಾ ಎಂಬ ವಿಚಾರವಾಗಿ ಮಾತನಾಡಿ, "ಅವರ ಹಳೇಯ ಫ್ರೆಂಡ್ಸ್ ಯಾರು ಬಿಜೆಪಿಗೆ ಬಂದಿದ್ದಾರೆ?, ಯಾರೂ ವಾಪಸ್ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಸ್ಪಷ್ಟವಾದಂತಹ ಉತ್ತರವನ್ನು ಈಗಾಗಲೇ ಎಸ್.ಟಿ. ಸೋಮಶೇಖರ್ ಕೊಟ್ಟಿದ್ದಾರೆ" ಎಂದರು.