ಅರಕಲಗೂಡು:ವಿದ್ಯುತ್ ಕಂಬ ಸ್ಥಾಪಿಸಲು ಜಾಗದ ಕೊರತೆ ಇದೆ, ಲೈಸೆನ್ಸ್ ಇರುವಷ್ಟರಲ್ಲಿಯೇ ಮನೆ ನಿರ್ಮಾಣ ಮಾಡಬೇಕು. ಅದರ ಬದಲು ರಸ್ತೆ ಚರಂಡಿ ಜಾಗವನ್ನು ಒತ್ತುವರಿ ಮಾಡಬಾರದು. ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್ ಎಚ್ಚರಿಕೆ ನೀಡಿದರು.
ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು: ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಚೆಸ್ಕಾಂಗೆ ಪ. ಪಂ. ಮುಖ್ಯಾಧಿಕಾರಿ ಸಲಹೆ - boy died by current shock in Arakalagudu
ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತಪಟ್ಟಿದ್ದಾನೆ. ಹಾಗಾಗಿ ಮನೆ ಮುಂದೆ ವಿದ್ಯುತ್ ಕಂಬದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಮನೆಗೆ ತೀರಾ ಹತ್ತಿರವಾಗಿದ್ರೆ ಅವುಗಳನ್ನು ಎಲೆಕ್ಟ್ರಿಕ್ ಕೊಳವೆಗಳಿಂದ ಕವರ್ ಮಾಡುವಂತೆ ಚೆಸ್ಕಾಂಗೆ ಮನವಿ ಮಾಡಿದ್ರೆ ಒಳ್ಳೆಯದು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್ ಸಲಹೆ ನೀಡಿದರು.
ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತಪಟ್ಟ ವಿಚಾರವಾಗಿ ಮಾತನಾಡಿದ ಅವರು, ಅವೈಜ್ಞಾನಿಕ ವಿದ್ಯುತ್ ಕಂಬಗಳ ನಿರ್ಮಾಣವೇ ಘಟನೆಗೆ ಕಾರಣ. ಕೈಚಾಚಿದರೆ ಸಿಗುವ ಸ್ಥಿತಿಯಲ್ಲಿವೆ, ಹೀಗಾಗಿ ಮಗು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರಬಹುದು. ಕೆಲವು ವಿದ್ಯುತ್ ಕಂಬಗಳು ಬಾಗಿಕೊಂಡಿವೆ, ಅವುಗಳನ್ನು ಸರಿಪಡಿಸದೆ ಹಾಗೆಯೇ ಇರುವುದು ಸರಿ ಅಲ್ಲ ಎಂದರೂ ಕೂಡಾ ಎಷ್ಟೋ ಕಂಬಗಳಲ್ಲಿ ವಿದ್ಯುತ್ ವೈರ್ ಜೋತು ಬಿದ್ದಿವೆ. ಅದಕ್ಕೆ ಸೂಕ್ತ ರೀತಿಯಲ್ಲಿ ಇನ್ಸುಲೇಷನ್ ಟೇಪ್ ಕೂಡಾ ಹಾಕಿಲ್ಲ. ಹೀಗಾಗಿ ಅದರ ಬಳಿ ಅಕಸ್ಮಾತಾಗಿ ಓಡಾಡುವ ಸಂದರ್ಭದಲ್ಲಿ ಕೈ ಅಥವಾ ಕಾಲಿಗೋ ವಿದ್ಯುತ್ ವೈರ್ ತಾಗಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು.
ಹಾಗಾಗಿ ಮನೆ ಮುಂದೆ ವಿದ್ಯುತ್ ಕಂಬದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಮನೆಗೆ ತೀರಾ ಹತ್ತಿರವಾಗಿದ್ರೆ ಅವುಗಳನ್ನು ಎಲೆಕ್ಟ್ರಿಕ್ ಕೊಳವೆಗಳಿಂದ ಕವರ್ ಮಾಡುವಂತೆ ಚೆಸ್ಕಾಂಗೆ ಮನವಿ ಮಾಡಿದ್ರೆ ಒಳ್ಳೆಯದು ಎಂದು ಸಲಹೆ ನೀಡಿದರು.