ಹಾಸನ: ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗಿದ್ದು, ಸಿಬ್ಬಂದಿಯನ್ನು ಡಿಎಆರ್ ಕ್ವಾಟ್ರಸ್ನಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇದರಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈಟಿವಿ ಭಾರತ ಸುದ್ದಿ ಪ್ರಸಾರ ಮಾಡಿದ್ದು, ಸಮಸ್ಯೆಗೆ ಪರಿಹಾರ ದೊರಕಿದೆ.
ಮೂರು ದಿನಗಳ ಹಿಂದೆ ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ್ದ ಪೊಲೀಸ್ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಆದರೆ ಇದರಿಂದ ಠಾಣೆಗೆ ಬರುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯುಂಟಾಗಿದೆ. ಈ ಹಿಂದೆ ಈಟಿವಿ ಭಾರತ ಸಮಸ್ಯೆಯ ಕುರಿತು ಸುದ್ದಿ ಪ್ರಸಾರ ಮಾಡಿತ್ತು. ಬೆಂಗಳೂರಿನಲ್ಲಿ ವಿಧಾನಸೌಧದ ಸಿಬ್ಬಂದಿಗಳಿಗೆ ಸೋಂಕು ತಗುಲಿದರೆ ವಿಧಾನಸೌಧಕ್ಕೆ ಸ್ಯಾನಿಟೈಸ್ ಮಾಡಿ ಕೆಲಸ ಆರಂಭಿಸುವ ಸರ್ಕಾರ, ಪೊಲೀಸ್ ಠಾಣೆಗೆ ಮಾತ್ರ ಬೀಗ ಹಾಕುವುದು ಎಷ್ಟು ಸರಿ ಎಂಬ ವಿಚಾರದಲ್ಲಿ ಸುದ್ದಿ ಹಬ್ಬಿಸಿತ್ತು. ಸದ್ಯ ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಠಾಣೆಗೆ ಬೇರೆ ಭಾಗಗಳಿಂದ ಪೊಲೀಸರನ್ನು ನಿಯೋಜಿಸಿ, ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದೆ.