ಹಾಸನ:ಕೊರೊನಾ ವಿಚಾರವಾಗಿ ವ್ಯಾಟ್ಸ್ಆ್ಯಪ್ಗಳಲ್ಲಿ ಬರುವ ಇಲ್ಲ ಸಲ್ಲದ ಸಂದೇಶಗಳನ್ನು ನಂಬಲು ಹೋಗಬೇಡಿ. ಅವುಗಳಿಂದ ದೂರವಿರಿ ಎಂದು ಭಾರತೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಹೇಳಿದರು.
ಕೋವಿಡ್ ಕುರಿತು ಬರುವ ಸಂದೇಶಗಳಿಂದ ದೂರವಿರಿ: ಪ್ರೊ.ನರೇಂದ್ರನಾಯಕ್ - ಬಾಲ ವಿಜ್ಞಾನ ಪತ್ರಿಕೆಯ ವಾರ್ಷಿಕೋತ್ಸವ
ಕೋವಿಡ್ ಕುರಿತು ಬರುವ ಸಂದೇಶಗಳನ್ನು ನಂಬಬಾರದು. ಅಲ್ಲಿ ಹೇಳುವ ಯಾವುದೇ ಮಾಹಿತಿಗಳನ್ನು ಅನುಸರಿಸಬಾರದು ಎಂದು ಭಾರತೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಬಾಲ ವಿಜ್ಞಾನ ಪತ್ರಿಕೆಯ 40ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಬಾಲ ವಿಜ್ಞಾನೋತ್ಸವ ಸಮಾರಂಭ ಉದ್ಘಾಟಿಸಿದರು.
ಕೋವಿಡ್ ಬಂದರೆ ಮೀನು, ಮಾಂಸ, ಮೊಟ್ಟೆ ತಿನ್ನಬಾರದು ಎಂದು ಹೇಳುತ್ತಾರೆ. ಆದರೆ, ಪೌಷ್ಠಿಕಾಂಶ ಹೆಚ್ಚಾಗಬೇಕಾದರೆ ಮಾಂಸಾಹಾರ ಸೇವಿಸಬೇಕು. ಆಯುಷ್ ಇಲಾಖೆಯ ನೀಡಿದ ಗುಳಿಗೆಗಳನ್ನು ಸೇವಿಸಿದ ಜನರು ನನಗೆ ಕೋವಿಡ್ ಬರುವುದಿಲ್ಲ ಎಂದು ಮುಂಜಾಗ್ರತೆ ಕ್ರಮ ಅನುಸರಿಸುತ್ತಿಲ್ಲ. ಹಾಗಂತ ನಿರ್ಲಕ್ಷ್ಯ ತೋರದೆ ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸುವುದು ಉತ್ತಮ ಎಂದರು.