ಹಾಸನ :ರಸ್ತೆ ನಿರ್ಮಾಣದ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಪ್ರೀತಂಗೌಡ ಎದುರೇ ಮಾತಿನ ಚಕಮಕಿ ನಡೆದ ಘಟನೆ ಹಾಸನ ಸಮೀಪ ಬೂವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದು ಹಾಸನದ ಹಲವೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರೀತಂ ಗೌಡ ಭೂಮಿ ಪೂಜೆ ಸಲ್ಲಿಸಿದರು. ಅದೇ ರೀತಿ ಬೂವನಹಳ್ಳಿ ಗ್ರಾಮದ ಬಳಿ ಭೂಮಿ ಪೂಜೆ ನಡೆಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಶಾಸಕ ಪ್ರೀತಂಗೌಡ ಬಳಿ ರಸ್ತೆ ವಿಷಯಕ್ಕೆ ಸಂಬಂಧಿಸಿದಂತೆ ಜೋರು ಧ್ವನಿಯಲ್ಲಿ ಆಕ್ರೋಶ ಹೊರ ಹಾಕಲಾರಂಭಿಸಿದರು.
ರಸ್ತೆ ನಿರ್ಮಿಸುವ ವಿಚಾರಕ್ಕೆ ವಾಗ್ವಾದ.. ಪರಿಸ್ಥಿತಿ ತಿಳಿಗೊಳಿಸಿದ ಶಾಸಕ ಪ್ರೀತಂ ಗೌಡ - ರಸ್ತೆಗಾಗಿ ವಾಗ್ವಾದ
ಶಾಸಕ ಪ್ರೀತಂ ಗೌಡ ಅವರ ಜೊತೆಯಲ್ಲೇ ಇದ್ದ ಬೆಂಬಲಿಗರೊಬ್ಬರು ಮಧ್ಯದಲ್ಲಿ ಬಾಯಿ ಹಾಕಿ, ರಸ್ತೆ ಮಾಡಿಸಿ ಕೊಡ್ತಾರೆ ಆದರೆ ರಸ್ತೆಗೆ ಬೇಕಾದ ಜಾಗ ಬಿಡಿಸಿ ಕೊಡ್ತೀರಾ ಎಂದು ಜೋರು ಧ್ವನಿಯಲ್ಲಿ ಕೇಳಿದ್ದಾರೆ. ಈ ಘಟನೆ ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿದ್ದು, ಅಂತಿಮವಾಗಿ ಶಾಸಕ ಪ್ರೀತಂಗೌಡ ಎಲ್ಲರನ್ನೂ ಸಮಾಧಾನ ಮಾಡಿ ಸ್ಥಳದಿಂದ ತೆರಳಿದ್ದಾರೆ.
ಅವರನ್ನು ಸಮಾಧಾನ ಮಾಡಿದ ಶಾಸಕ ಪ್ರೀತಂ ಗೌಡ, ನಿಮಗೆ ಏನಾಗಬೇಕು ಹೇಳಣ್ಣ, ಮಾಡಿ ಕೊಡೋಣ ಎಂದು ಕೇಳಿದ್ದಾರೆ. ಅದಕ್ಕೆ ಅವರು ನಮಗೂ ಕೂಡ ರಸ್ತೆ ಬೇಕು ಎಂದು ತಿಳಿಸಿದ್ದಾರೆ. ಅದಕ್ಕೆ ಶಾಸಕ ಪ್ರೀತಂ ಗೌಡ ಆಯ್ತು, ಮಾಡಿಸೋಣ ಬಿಡಿ ಎಂದು ಭರವಸೆ ನೀಡಿದ್ದಾರೆ.
ಅಷ್ಟರಲ್ಲಿ ಶಾಸಕ ಪ್ರೀತಂ ಗೌಡ ಅವರ ಜೊತೆಯಲ್ಲೇ ಇದ್ದ ಬೆಂಬಲಿಗರೊಬ್ಬರು ಮಧ್ಯದಲ್ಲಿ ಬಾಯಿ ಹಾಕಿ, ರಸ್ತೆ ಮಾಡಿಸಿ ಕೊಡ್ತಾರೆ ಆದರೆ ರಸ್ತೆಗೆ ಬೇಕಾದ ಜಾಗ ಬಿಡಿಸಿ ಕೊಡ್ತೀರಾ ಎಂದು ಜೋರು ಧ್ವನಿಯಲ್ಲಿ ಕೇಳಿದ್ದಾರೆ. ಇದು ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿದೆ. ಅಂತಿಮವಾಗಿ ಶಾಸಕ ಪ್ರೀತಂಗೌಡ ಎಲ್ಲರನ್ನೂ ಸಮಾಧಾನ ಮಾಡಿ ಸ್ಥಳದಿಂದ ತೆರಳಿದ್ದಾರೆ.