ಹಾಸನ :ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಜಿಲ್ಲೆಯ ಅರಸೀಕೆರೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸರಗಳ್ಳರ ಕೈಗೆ ಕೋಳ ತೊಡಿಸಿದ ಖಾಕಿ ಟೀಮ್..! - ಸರಗಳ್ಳರ ಆರೋಪಿಗಳ ಬಂಧನ
ಸರಗಳ್ಳರನ್ನು ಬಂಧಿಸುವಲ್ಲಿ ಅರಸೀಕೆರೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಜುಲೈನಲ್ಲಿ ಅರಸೀಕೆರೆ ನಗರದ ಮಾರುತಿನಗರ ಬಡಾವಣೆಯಲ್ಲಿ ನಡೆದ ಪುಷ್ಪಾ ಎಂಬುವವರ ಸರಗಳ್ಳತನ ಸಂಬಂಧ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ನಗರದಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೂಕ್ಷ್ಮತೆ ಅರಿತ ಅರಸೀಕೆರೆ ಉಪ ವಿಭಾಗದ ಡಿವೈಎಸ್ಪಿ ನಾಗೇಶ್ ಅವರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಂಗಸ್ವಾಮಿ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು.
ಆರೋಪಿಗಳಾದ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾರುತಿ ಹಾಗೂ ಬಿದರೇಗುಡಿ ಗ್ರಾಮದ ಗೌತಮ್ ಅವರನ್ನ ಪತ್ತೆಹಚ್ಚಿ, ಬಂಧಿಸಿ, ಆರೋಪಿಗಳಿಂದ 25 ಗ್ರಾಂ ಚಿನ್ನದ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಬೈಕ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಂಗಸ್ವಾಮಿ ಸಬ್ಇನ್ಸ್ಪೆಕ್ಟರ್ ತಿಮ್ಮಯ್ಯ ಪ್ರೊಬೆಷನರಿ ಸಬ್ಇನ್ಸ್ಪೆಕ್ಟರ್ ಅರುಣ್ ಕುಮಾರ್ ಸಿಬ್ಬಂದಿಗಳಾದ ಮಂಜೇಗೌಡ ರಘು ಕುಮಾರ್ ಭಾಗವಹಿಸಿದ್ದರು.