ಹಾಸನ: ಕೊರೊನಾ ವಿರುದ್ಧ ಹೋರಾಡುವ ದೃಷ್ಟಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣಕಾಸಿನ ನೆರವು ನೀಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಕೋರಿದ್ದರು. ಈ ಹಿನ್ನೆಲೆ ಇಂದು ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ಪರಿಪೂರ್ಣ ಟ್ರಸ್ಟ್ ಸಂಸ್ಥೆ, ಜನಕಲ್ಯಾಣ ರಿಸರ್ಚ್ ಅಂಡ್ ಚಾರಿಟೇಬಲ್ ಟ್ರಸ್ಟ್, ಕಾಮಧೇನು ವೃದ್ಧಾಶ್ರಮ ಹಾಗೂ ನಿವೃತ್ತ ಇಂಜಿನಿಯರ್ ನಿರ್ವಾಣಿಗೌಡ ಒಟ್ಟಾಗಿ 3 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಸಿಎಂ ಪರಿಹಾರ ನಿಧಿಗೆ ಹಾಸನದ ವಿವಿಧ ಸಂಸ್ಥೆಗಳಿಂದ 3 ಲಕ್ಷ ರೂಪಾಯಿ ದೇಣಿಗೆ - hassan vorona news
ಕೊರೊನಾದಿಂದಾಗಿ ಸಿಎಂ ಪರಿಹಾರ ನಿಧಿಗೆ ರಾಜ್ಯದ ಹಲವು ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡುತ್ತಿವೆ. ಇನ್ನು ಹಾಸನದ ವಿವಿಧ ಸಂಸ್ಥೆಗಳು 3 ಲಕ್ಷ ದೇಣಿಗೆ ನೀಡಿ ಕೊರೊನಾ ವಿರುದ್ಧ ಹೋರಾಡಲು ಕೈಜೋಡಿಸಿವೆ.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಸೇರಿ 25 ಸಾವಿರ ರೂ.ಗಳ ಚೆಕ್ ನೀಡಿದರು. ಪರಿಪೂರ್ಣ ಟ್ರಸ್ಟ್ ಸಂಸ್ಥೆ ಅಧ್ಯಕ್ಷ ಡಾ. ಗುರುರಾಜು ನೇತೃತ್ವದಲ್ಲಿ 1 ಲಕ್ಷ ರೂ. ಚೆಕ್ ನೀಡಲಾಯಿತು.
ಇನ್ನು ಜನಕಲ್ಯಾಣ ರಿಸರ್ಚ್ ಅಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ವಿ.ಕರಿಗೌಡರ ನೇತೃತ್ವದಲ್ಲಿ 1 ಲಕ್ಷ ರೂ. ಚೆಕ್, ಕಾಮಧೇನು ವೃದ್ಧಾಶ್ರಮದ ಉಪಾಧ್ಯಕ್ಷ ಮುತ್ತತ್ತಿ ರಾಜಣ್ಣ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಸೇರಿ 50 ಸಾವಿರ ರೂಪಾಯಿಯ ಚೆಕ್ ಹಾಗೂ ನಿವೃತ್ತ ಇಂಜಿನಿಯರ್ ನಿರ್ವಾಣಿಗೌಡ ಅವರು ತಮ್ಮ ವೈಯಕ್ತಿಕ 25 ಸಾವಿರ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದರು.