ಬೆಂಗಳೂರು:ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ 335 ನಾಮಪತ್ರ ಸಲ್ಲಿಕೆಯಾಗಿದ್ದು ಅದರಲ್ಲಿ 49 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮೊದಲ ಹಂತದ ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆಯನ್ನು ರಾಜ್ಯ ಚುನಾವಣಾ ಆಯೋಗ ನಡೆಸಿದೆ. ಉಡುಪಿಯಲ್ಲಿ ಸಲ್ಲಿಕೆಯಾಗಿದ್ದ ಎಲ್ಲ 14 ಅಭ್ಯರ್ಥಿಗಳ ನಾಮಪತ್ರ, ಚಿತ್ರದುರ್ಗದಿಂದ ಸಲ್ಲಿಕೆಯಾಗಿದ್ದ 24 ಅಭ್ಯರ್ಥಿಗಳ ನಾಮಪತ್ರ ಹಾಗು ಚಿಕ್ಕಬಳ್ಳಾಪುರದಿಂದ ಸಲ್ಲಿಕೆಯಾಗಿದ್ದ ಎಲ್ಲ 25 ನಾಮಪತ್ರಗಳನ್ನು ಆಯೋಗ ಸಿಂಧುಗೊಳಿಸಿದೆ. ಹಾಸನದಲ್ಲಿ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 4 ನಾಮಪತ್ರ ತಿರಸ್ಕೃತಗೊಂಡಿವೆ. ದಕ್ಷಿಣ ಕನ್ನಡದಲ್ಲಿ ಕಣಕ್ಕಿಳಿದಿದ್ದ 13 ಅಭ್ಯರ್ಥಿಗಳಲ್ಲಿ3 ನಾಮಪತ್ರ ತಿರಸ್ಕೃತಗೊಂಡಿವೆ. ತುಮಕೂರಿನಿಂದ ಸಲ್ಲಿಕೆಯಾಗಿದ್ದ 23 ಅಭ್ಯರ್ಥಿಗಳಲ್ಲಿ 4, ಮಂಡ್ಯ 27ರಲ್ಲಿ 1, ಮೈಸೂರು 30 ರಲ್ಲಿ 5, ಚಾಮರಾಜನಗರ 13 ರಲ್ಲಿ 1, ಬೆಂಗಳೂರು ಗ್ರಾಮಾಂತರ 21 ರಲ್ಲಿ 3, ಬೆಂಗಳೂರು ಉತ್ತರ 40 ರಲ್ಲಿ 8, ಬೆಂಗಳೂರು ಕೇಂದ್ರ 32 ರಲ್ಲಿ 9, ಕೋಲಾರ 23 ರಲ್ಲಿ 3 ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.