ಕರ್ನಾಟಕ

karnataka

ETV Bharat / state

ಮಲಪ್ರಭೆಯ ಶಾಂತಿಗಾಗಿ ಉಡಿ ತುಂಬಿ ಪೂಜೆ ಸಲ್ಲಿಸಿದ ಮಹಿಳೆಯರು - ಮಲಪ್ರಭಾ ನದಿ ಪಾತ್ರದ ಗ್ರಾಮಗಳು ಜಲಾವೃತ

ಭಾರಿ ಮಳೆಯಿಂದಾಗಿ ಮಲಪ್ರಭಾ ನದಿ ಪಾತ್ರದ ಗ್ರಾಮಗಳು ಜಲಾವೃತಗೊಂಡಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ.

Malaprabha River
ಮಲಪ್ರಭೆಯ ಶಾಂತಿಗಾಗಿ ಉಡಿ ತುಂಬಿ ಪೂಜೆ ಸಲ್ಲಿಸಿದ ಮಹಿಳೆಯರು

By

Published : Aug 18, 2020, 10:32 PM IST

ಗದಗ:ಅಬ್ಬರಿಸುತ್ತಿರುವ ಮಲಪ್ರಭೆ ಶಾಂತಳಾಗುವಂತೆ ಪ್ರಾರ್ಥಿಸಿ ನರಗುಂದ ತಾಲೂಕಿನ ಕೊಣ್ಣೂರು ಹಾಗೂ ಕಲ್ಲಾಪುರದ ಜನರು ಪ್ರವಾಹದ ಹೊಳೆಗೆ ಉಡಿ ತುಂಬುವುದರೊಂದಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಮಲಪ್ರಭೆಯ ಶಾಂತಿಗಾಗಿ ಉಡಿ ತುಂಬಿ ಪೂಜೆ ಸಲ್ಲಿಸಿದ ಮಹಿಳೆಯರು

ಕೊಣ್ಣೂರು ಗ್ರಾಮದ ಜಾಡರ ಓಣಿ ಹಾಗೂ ಕಲ್ಲಾಪುರದ ಹತ್ತಾರು ಮಹಿಳೆಯರು ತಂಡೋಪತಂಡವಾಗಿ ಬಂದು ಕೊಣ್ಣೂರು ಬ್ರಿಡ್ಜ್ ಬಳಿ ನದಿಗೆ ಪೂಜೆ ಸಲ್ಲಿಸಿದರು. ಹಣ್ಣು, ಕಾಯಿ, ಸೀರೆ, ‌ಕಣ ಹಾಗೂ ದವಸ ಧಾನ್ಯಗಳನ್ನು ಉಡಿ ತುಂಬಿ ಶಾಂತಳಾಗುವಂತೆ ಪ್ರಾರ್ಥಿಸಿದರು.

ಕಳೆದ ವರ್ಷವಷ್ಟೇ ಅಬ್ಬರಿಸಿ‌ದ್ದ ಮಲಪ್ರಭೆ ಇದೀಗ ಮತ್ತೊಮ್ಮೆ‌ ಭೋರ್ಗರೆಯುತ್ತಿದ್ದಾಳೆ. ನದಿ ಪಾತ್ರದ ಗ್ರಾಮಗಳು ಜಲಾವೃತಗೊಂಡಿದ್ದು, ಜಮೀನುಗಳಲ್ಲಿ ಬೆಳೆದಿದ್ದ ಫಸಲು ನೀರು ಪಾಲಾಗಿದೆ. ಮನೆಗಳಿಗೆ ನೀರು ನುಗ್ಗಿದ್ದು, ಬದುಕು ಬೀದಿಗೆ ಬಂದಿದೆ. ತಾಯಿ ಮಲಪ್ರಭೆ ಕೃಪೆ ತೋರಬೇಕು ಎಂದು ಭಕ್ತಿಯಿಂದ ಬೇಡಿಕೊಂಡರು.

ABOUT THE AUTHOR

...view details