ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ಜನ ಹತ್ತಿರ ಸುಳಿಯದಂತೆ ಸಿ.ಸಿ.ಪಾಟೀಲ್​​ಗೆ ಟೈಟ್​​ ಸೆಕ್ಯೂರಿಟಿ

ಜಿಲ್ಲಾಡಳಿತ ಭವನದಲ್ಲಿ ಕೋವಿಡ್-19 ಕುರಿತು ಅಧಿಕಾರಿಗಳ ಸಭೆಗೆ ಹಾಜರಾಗಿದ್ದರು. ಈ ವೇಳೆ ಕ್ವಿಕ್ ರೆಸ್ಪಾನ್ಸ್ ಟೀಮ್​​ನ 10 ಜನ ಪೊಲೀಸ್ ಸಿಬ್ಬಂದಿ ಹಗ್ಗ ಹಿಡಿದು ನಡೆಯುತ್ತಾ ಸಚಿವರ ಹತ್ತಿರ ಯಾರೂ ಸುಳಿಯದಂತೆ ನೋಡಿಕೊಂಡರು. ಕೊರೊನಾ ಹರಡುತ್ತಿರುವ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಲಾಗಿದೆ.

Security increases for CC Patil for fear of corona in Gadag
ಕೊರೊನಾ ಭೀತಿ: ಜನ ಹತ್ತಿರ ಸುಳಿಯದಂತೆ ಸಿ.ಸಿ.ಪಾಟೀಲ್​​ಗೆ ಟೈಟ್​​ ಸೆಕ್ಯೂರಿಟಿ

By

Published : Jul 1, 2020, 11:07 PM IST

ಗದಗ: ಗಣಿ‌ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್​​​ಗೆ ಇಂದು ಕ್ಯೂಆರ್​​ಟಿ ಪೊಲೀಸ್ ತಂಡ ಸಾಕಷ್ಟು ಭದ್ರತೆ ಕಲ್ಪಿಸಲಾಗಿತ್ತು. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಸಾರ್ವಜನಿಕರು ಸಚಿವರಿಗೆ ಮುಗಿಬೀಳಬಾರದು ಎಂಬ ಉದ್ದೇಶದಿಂದ ಸಾಕಷ್ಟು ಭದ್ರತೆ ಕಲ್ಪಿಸಲಾಗಿತ್ತು.

ಕೊರೊನಾ ಭೀತಿ: ಜನ ಹತ್ತಿರ ಸುಳಿಯದಂತೆ ಸಿ.ಸಿ.ಪಾಟೀಲ್​​ಗೆ ಟೈಟ್​​ ಸೆಕ್ಯೂರಿಟಿ

ಜಿಲ್ಲಾಡಳಿತ ಭವನದಲ್ಲಿ ಕೋವಿಡ್-19 ಕುರಿತು ಅಧಿಕಾರಿಗಳ ಸಭೆಗೆ ಹಾಜರಾಗಿದ್ದರು. ಈ ವೇಳೆ ಕ್ವಿಕ್ ರೆಸ್ಪಾನ್ಸ್ ಟೀಮ್​​ನ 10 ಜನ ಪೊಲೀಸ್ ಸಿಬ್ಬಂದಿ ಹಗ್ಗ ಹಿಡಿದು ನಡೆಯುತ್ತಾ ಸಚಿವರ ಹತ್ತಿರ ಯಾರೂ ಸುಳಿಯದಂತೆ ನೋಡಿಕೊಂಡರು.

ಇಂದಿನ‌ ಸಭೆಯಲ್ಲೂ ಎಲ್ಲಾ ಅಧಿಕಾರಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ‘ನಮ್ಮ ಆರೋಗ್ಯ ನಮ್ಮ ಕೈನಲ್ಲಿ’ ಎಂಬ ಸಂದೇಶವನ್ನು ಸಚಿವರು ಸಾರಿ ಸಾರಿ ಹೇಳುವ ಮೂಲಕ ಮೊದಲು ತಾವು ಪಾಲನೆ ಮಾಡಲು ಮುಂದಾದರು.

ಇನ್ನು ಕೆಲವರು ಜನಸಾಮಾನ್ಯರ ‌ಮಧ್ಯೆ ಕೆಲಸ ಮಾಡುವ ಜನಪ್ರತಿನಿಧಿಗಳಿಗೆ, ಸಚಿವರಿಗೆ ಈ ರೀತಿಯಾಗಿ ಪ್ರೊಟೆಕ್ಷನ್ ಬೇಕಿತ್ತಾ ಎಂಬುದು ಕೆಲವರ ಪ್ರಶ್ನೆಯಾಗಿತ್ತು. ಪ್ರೊಟೆಕ್ಷನ್ ಮೂಲಕ ಜನಸಾಮಾನ್ಯರ ಕಷ್ಟನಷ್ಟಗಳನ್ನು ಆಲಿಸಲು ಹೇಗೆ ಸಾಧ್ಯ ಅನ್ನೋ ಮಾತುಗಳೂ ಸಹ ಕೇಳಿಬಂದವು.

ABOUT THE AUTHOR

...view details