ಕರ್ನಾಟಕ

karnataka

ETV Bharat / state

ಈರುಳ್ಳಿ ಬೆಲೆಯಲ್ಲಿ ದಿಢೀರ್​​ ಕುಸಿತ: ರೊಚ್ಚಿಗೆದ್ದ ರೈತರಿಂದ ಪ್ರತಿಭಟನೆ - ಗದಗ ಎಸ್​​ಪಿ ಶ್ರೀನಾಥ್ ಜೋಷಿ

ಈರುಳ್ಳಿ ಬೆಲೆಯಲ್ಲಿ ದಿಢೀರನೆ‌ ಕುಸಿತವಾದ ಹಿನ್ನೆಲೆ ಆಕ್ರೋಶಗೊಂಡ ರೈತರು ಗದಗದಲ್ಲಿ ಪ್ರತಿಭಟನೆ ನಡೆಸಿದ್ರು. ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.

ರೈತರಿಂದ ಪ್ರತಿಭಟನೆ

By

Published : Nov 5, 2019, 4:31 PM IST

ಗದಗ:ಈರುಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ ಕಂಡ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು ದಲ್ಲಾಳಿಗಳ ಅಂಗಡಿಯಈರುಳ್ಳಿ ತೂರಿ ಗಾಜು ಪುಡಿ ಮಾಡಿದ ಘಟನೆ ಗದಗದ ಎಪಿಎಂಸಿಯಲ್ಲಿ ನಡೆದಿದೆ.

ನಗರದ ಹಳೆಯ ಡಿಸಿ ಆಫೀಸ್​​ ವೃತ್ತದಲ್ಲಿ ರಸ್ತೆ ತಡೆದ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದರೂ ರೈತರು ಮಾತ್ರ ಸ್ಥಳ ಬಿಟ್ಟು ಕದಲಲಿಲ್ಲ. ಪರಿಣಾಮ 1 ಘಂಟೆಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿ ಬಂದ್ ಆಗಿತ್ತು.

ಈರುಳ್ಳಿ ಬೆಲೆಯಲ್ಲಿ ದಿಢೀರ್​​ ಕುಸಿತ

ನೆರೆ ಹಾವಳಿಯಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಈರುಳ್ಳಿ ಬೆಳೆಗಾರರಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಕಳೆದ ಕೆಲ ದಿನಗಳಲ್ಲಿ 4 ರಿಂದ 5 ಸಾವಿರ ರೂಗಳಿದ್ದ ಈರುಳ್ಳಿ ಬೆಲೆ‌ ಈಗ ಏಕಾಏಕಿ 1,500 ರೂಗೆ ಕುಸಿದಿದೆ. ಇದರಿಂದ ರೈತರಿಗೆ ಆಘಾತವಾಗಿದೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಾದ್ರೂ ರಾಜ್ಯ ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ನೀಡಬೇಕೆಂದು ರೈತರು ಆಗ್ರಹಿಸಿದರು. ಸ್ಥಳಕ್ಕೆ ಗದಗ ಎಸ್​​ಪಿ ಶ್ರೀನಾಥ್ ಜೋಷಿ, ಎಸಿ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸಿದ್ರು. ದಲ್ಲಾಳಿಗಳ ಜೊತೆ ಮಾತನಾಡಿ ಸೂಕ್ತ ಬೆಲೆ ಒದಗಿಸೋ ಪ್ರಯತ್ನ ಮಾಡೋ ಭರವಸೆ ಸಿಕ್ಕ ನಂತರ ರೈತರು ತಮ್ಮ ಪ್ರತಿಭಟನೆ ಹಿಂಪಡೆದ್ರು.

ABOUT THE AUTHOR

...view details