ಗದಗ:ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಜನರು ಹೊರಗೆ ಬಾರದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ, ನಗರದ ಪೊಲೀಸರ ನಡೆ ಮಾತ್ರ ಸಾರ್ವಜನಿಕರಿಗೆ ಕೊಂಚ ಕಿರಿಕಿರಿ ಉಂಟು ಮಾಡಿದೆ.
ಔಷಧಿ ತರಲು ಹೋದ್ರೂ ಪೊಲೀಸರು ಟಾರ್ಚರ್ ಕೊಡ್ತಾರೆಂಬ ಆರೋಪ.. - Corona
ಸರ್ಕಾರದ ಆದೇಶದಂತೆ ದಿನದ 24 ಗಂಟೆಯೂ ಮೆಡಿಸಿನ್ ಶಾಪ್ಗಳು ತೆರೆದಿರಲಿವೆ. ಈ ಹಿನ್ನೆಲೆಯಲ್ಲಿ ಜನ ತಮಗೆ ಅವಶ್ಯಕ ಔಷಧಿಗಳನ್ನು ಖರೀದಿಸುವ ಸಲುವಾಗಿ ಬಂದರೆ ಅಂತವರನ್ನೂ ಸಹ ಶಹರ ಪೊಲೀಸ್ ಠಾಣೆ ಸಿಬ್ಬಂದಿ ತಡೆಯುತ್ತಿದ್ದಾರೆ.
ಔಷಧಿ ತರೋಕೆ ಹೋದ್ರೂ ಪೊಲೀಸರು ಟಾರ್ಚರ್ ಕೊಡ್ತಾರೆ: ಗದಗ ಜನರ ಆರೋಪ
ಸರ್ಕಾರದ ಆದೇಶದಂತೆ ದಿನದ 24 ಗಂಟೆಯೂ ಮೆಡಿಸಿನ್ ಶಾಪ್ಗಳು ತೆರೆದಿರಲಿವೆ. ಈ ಹಿನ್ನೆಲೆಯಲ್ಲಿ ಜನ ತಮಗೆ ಅವಶ್ಯಕ ಔಷಧಿಗಳನ್ನು ಖರೀದಿಸುವ ಸಲುವಾಗಿ ಬಂದರೆ ಅಂತವರನ್ನೂ ಸಹ ಶಹರ ಪೊಲೀಸ್ ಠಾಣೆ ಸಿಬ್ಬಂದಿ ತಡೆಯುತ್ತಿದ್ದಾರೆ.
ಕೈಯಲ್ಲಿ ಔಷಧಿಗಳಿದ್ದರೂ ಸಹ ವಿಚಾರಣೆ ನಡೆಸದೆ ವಿನಾಕಾರಣ ಪೊಲೀಸರು ಬೈಕ್ ಕೀಯನ್ನು ಕಸಿದುಕೊಂಡು ಠಾಣೆಗೆ ಕರೆಸಿಕೊಳ್ಳುತ್ತಿದ್ದಾರೆ. ಠಾಣೆಯಲ್ಲಿ ಬಹಳ ಸಮಯ ನಿಲ್ಲಿಸಿ ತೊಂದರೆ ಕೊಡುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.